ಬೆಂಗಳೂರು: ಕೇರಳದ ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿ ಭಾನುವಾರ ಸುಡು ಮದ್ದು ಸ್ಫರ್ಧೆಯ ವೇಳೆ ನಡೆದ ಭೀಕರ ಅಗ್ನಿ ಅವಘಡದಲ್ಲಿ ಕರ್ನಾಟಕದ ಮೂವರು ಗಂಭೀರವಾಗಿ ಗಾಯಗೊಂಡಿದ್ದು , ಓರ್ವ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರದಿಂದ ಜೋಳದ ವ್ಯಾಪಾರಕ್ಕೆಂದು ತೆರಳಿದ್ದ ನಾಲ್ವರ ಪೈಕಿ ಓರ್ವ ನಾಪತ್ತೆಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡು ಕೊಲ್ಲಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಕುಮಾರ್ (30) ಎನ್ನುವವರ ಎಡಕಣ್ಣು ಸಂಪೂರ್ಣವಾಗಿ ಹಾನಿಯಾಗಿದ್ದು, ಕೃಷ್ಣ (22) ಎನ್ನುವವರ ಬಲಗಾಲು ಮಂಡಿ ಪುಡಿಯಾಗಿದ್ದು, ನಾಗರಾಜ್ (25) ಎನ್ನುವವರ ಬಲಗಾಲು ಮುರಿದಿದೆ. ಗೂರಪ್ಪ ಎನ್ನುವವರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನಾಲ್ವರೂ ಕಳೆದ ಕೆಲ ವರ್ಷಗಳಿಂದ ದೇವಾಲಯದ ಜಾತ್ರೆ ವೇಳೆ ಜೋಳ ಮಾರಾಟ ಮಾಡುತ್ತಿದ್ದರು. ಜೋಳ ವ್ಯಾಪಾರವಾದ ಬಳಿಕ ಸಿಡಿಮದ್ದು ಪ್ರದರ್ಶನ ನೋಡುವ ವೇಳೆ ಸಂಭವಿಸಿದ ದುರಂತದಲ್ಲಿ ಗಾಯಗೊಂಡಿದ್ದಾರೆ.