ಚೆನ್ನೈ: ಕಳೆದ ಎರಡು ತಿಂಗಳುಗಳಿಂದ ತಮ್ಮ ಎರಡು ಸಿನೆಮಾಗಳ ಚಿತ್ರೀಕರಣದಲ್ಲಿ ನಿರಂತರವಾಗಿ ಭಾಗಿಯಾಗಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂದಿನ ತಮಿಳು ಭೂಗತ ಸಿನೆಮಾ ‘ಕಬಾಲಿ’ಗೆ ತಮ್ಮ ಭಾಗದ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.
“ಕಳೆದ ವಾರ ಪೂರ್ತಿ ‘ಕಬಾಲಿ’ ಸಿನೆಮಾದ ಡಬ್ಬಿಂಗ್ ನಲ್ಲಿ ಅವರು (ರಜನಿ) ಬ್ಯುಸಿಯಾಗಿದ್ದರು ಮತ್ತು ಭಾನುವಾರ ಸಂಪೂರ್ಣಗೊಳಿಸಿದರು” ಎಂದು ಸಿನೆಮಾದ ಮೂಲಗಳು ತಿಳಿಸಿವೆ.
ಬಹುನಿರೀಕ್ಷಿತ ಕಬಾಲಿ ಟೀಸರ್ ಮೇ ೧ ರಂದು ಅನಾವಣಗೊಳ್ಳಲಿದೆ ಎಂದು ಕೂಡ ಮೂಲಗಳು ಧೃಢೀಕರಿಸಿವೆ. “ಕಬಾಲಿ ಚಿತ್ರತಂಡಮೇ ೧ ರಂದು ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಒಂದು ನಿಮಿಷದ ಟೀಸರ್” ಎಂದು ತಿಳಿಯಲಾಗಿದೆ.
ಪ ರಂಜಿತ್ ನಿರ್ದೇಶನದ ಈ ಸಿನೆಮಾದಲ್ಲಿ ರಾಧಿಕಾ ಆಪ್ಟೆ, ಕಲೈರಸನ್, ದಾನಿಷ್ಕಾ, ದಿನೇಶ್, ಕಿಶೋರ್ ಮತ್ತು ಋತ್ವಿಕಾ ನಟಿಸಿದ್ದಾರೆ.