ಕರ್ನಾಟಕ

ಚಿತ್ರದುರ್ಗಾ ಹೆಗ್ಗೆರೆ ಗೇಟ್ ಬಳಿ ಭೀಕರ ಸರಣಿ ಅಪಘಾತ: 7 ವಿದ್ಯಾರ್ಥಿನಿಯರ ದುರ್ಮರಣ

Pinterest LinkedIn Tumblr

accident

ಚಿತ್ರದುರ್ಗಾ: ರಾಷ್ಟ್ರೀಯ ಹೆದ್ದಾರಿ 156ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ ಪರಿಣಾಮ 8 ಮಂದಿ ಮೃತಪಟ್ಟಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.

ಇಂದು ಬೆಳಿಗ್ಗೆ ಸುಮಾರು 5 ಗಂಟೆಯಲ್ಲಿ ಚಿತ್ರದುರ್ಗಾ ಹೆಗ್ಗೆರೆ ಗೇಟ್ ಬಳಿ ಖಾಸಗಿ ಬಸ್, ಸರ್ಕಾರಿ ಬಸ್ ಹಾಗೂ ಕ್ರೂಸರ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 7 ವಿದ್ಯಾರ್ಥಿನಿಯರು, ಓರ್ವ ಚಾಲಕ ಸೇರಿ 8 ಮಂದಿ ಸಾವನಪ್ಪಿದ್ದಾರೆ.

ಬಳ್ಳಾರಿಯ ನಿವಾಸಿಗಳಾದ ವಿದ್ಯಾರ್ಥಿನಿಯರು ಖಾಸಗಿ ಕಂಪನಿಯ ಉದ್ಯೋಗ ಪಡೆಯಲು ಬೆಂಗಳೂರಿಗೆ ಸಂದರ್ಶನಕ್ಕೆಂದು ಬಂದಿದ್ದರು. ಸಂದರ್ಶನ ಮುಗಿಸಿ ಇಂದು ಬೆಳಗ್ಗೆ ಕ್ರೂಸರ್ ನಲ್ಲಿ ಬಳ್ಳಾರಿಗೆ ವಾಪಸ್ಸಾಗುತ್ತಿದ್ದಾಗ ಭೀಕರ ಅಪಘಾತಕ್ಕೆ ತುತ್ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ಶಾಂತಿ, ಸುಧಾ, ಶೃತಿ, ಸ್ಮೀತಾ ಸರಿತಾ ಭಾರತಿ, ಜಯಶ್ರೀ ಮತ್ತು ಚಾಲಕ ಚಂದ್ರೇಗೌಡ ಎಂದು ಗುರುತಿಸಲಾಗಿದೆ.

Write A Comment