ಕರ್ನಾಟಕ

ಬೆಂಗಳೂರು; 122 ರೌಡಿಗಳ ಮನೆ ಮೇಲೆ ದಾಳಿ

Pinterest LinkedIn Tumblr

bang

ಬೆಂಗಳೂರು, ಮೇ ೩: ನಗರದ ಪೂರ್ವ, ಆಗ್ನೇಯ ಮತ್ತು ಈಶಾನ್ಯ ವಿಭಾಗದ ಪೊಲೀಸ್ ಠಾಣೆಗಳಲ್ಲಿರುವ 122 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಅವರ ಪೂರ್ವಾಪರ, ಕಾರ್ಯಚಟುವಟಿಕೆಗಳ ಬಗ್ಗೆ ಠಾಣೆಗೆ ಕರೆಸಿ ವಿವರ ಪಡೆದರು.

ವಿಶೇಷ ಕಾರ್ಯಾಚರಣೆ ಸಮಯದಲ್ಲಿ ಪೂರ್ವ ವಿಭಾಗದ 51, ಈಶಾನ್ಯ ವಿಭಾಗದ 19 ಮತ್ತು ಆಗ್ನೇಯ ವಿಭಾಗದ 52 ರೌಡಿಗಳು ಸೇರಿದಂತೆ ಒಟ್ಟು 122 ರೌಡಿಗಳ ಚಟುವಟಿಕೆಗಳು, ಚಲನವಲನ, ಸಹಚರರ ವಿವರ, ಪ್ರಸ್ತುತ ಅವರು ನಿರ್ವಹಿಸುತ್ತಿರುವ ವೃತ್ತಿ, ಅವರ ವಾಸದ ವಿಳಾಸ, ಅವರ ಇತ್ತೀಚಿನ ಛಾವಚಿತ್ರಗಳು ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿದರು.

ಮುಂಜಾನೆ 3ಗಂಟೆಯಿಂದ ಸುಮಾರು ೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ರೌಡಿ ಚಟುವಟಿಕೆ ನಡೆಸುತ್ತಿರುವವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿದೆ.

Write A Comment