ಬೆಂಗಳೂರು: ರೈಲ್ವೆ ಟಿಕೆಟ್ ಪರಿವೀಕ್ಷಕ ತನ್ನ ಹೆಂಡತಿಯ ಸೀರೆ ಎಳೆದ ಎಂದು ಆರೋಪಿಸಿ ವ್ಯಕ್ತಿಯೊಬ್ಬ ರೈಲನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು- ಚೆನ್ನೈ ಏಕ್ಸ್ ಪ್ರೆಸ್ ನಲ್ಲಿ ರೈಲು ಪ್ರಯಾಣ ಟಿಕೆಟ್ ಪರಿವೀಕ್ಷಕ ತನ್ನ ಹೆಂಡತಿಯ ಸೀರೆ ಎಳೆದಿದ್ದಾನೆ . ಆತನ ವಿರುದ್ದ ರೈಲ್ವೆ ಪ್ರಾಧಿಕಾರದ ಅಧಿಕಾರಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈಲು ತಡೆದು ಪ್ರತಿಭಟನೆ ನಡೆಸಿದನು. ನಂತರ ಸ್ಥಳಕ್ಕೆ ಬಂದ ರೈಲ್ವೆ ಅಧಿಕಾರಿಗಳು ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಆತನಿಗೆ ಮನವರಿಕೆ ಮಾಡಿಕೊಟ್ಟರು.
ಆತನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ಕೆಲ ಸಮಯದ ನಂತರ ಬಿಡುಗಡೆ ಮಾಡಿದರು. ನಂತರ ಸಮಸ್ಯೆ ಬಗೆಹರಿಸಿ ಆತನನ್ನು ವಾಪಸ್ ಕಳುಹಿಸಿದ ಪೊಲೀಸರು ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.