ಬೆಂಗಳೂರು: ಬರ ಪರಿಹಾರ ಪಡೆಯೋ ಹಿನ್ನೆಲೆಯಲ್ಲಿ ಶನಿವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಕಾರ್ಯ ಫಲಪ್ರಧವಾಗಿದೆ ಅಂತ ತಿಳಿಸಿದ್ದಾರೆ.
ನಗರದ ನಗರ್ತರಪೇಟೆಯಲ್ಲಿನ ಕಾಳಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರಧಾನಿ ಮೋದಿ ಜೊತೆ ಒಂದೂವರೆ ಘಂಟೆಗೂ ಹೆಚ್ಚು ಕಾಲ ಬರ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಚೆರ್ಚೆ ನಡೆಸಿದ್ದೇನೆ. 12 ಸಾವಿರದ 272 ಕೋಟಿ ರೂ. ಹೆಚ್ಚುವರಿ ಬರ ಪರಿಹಾರದ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ. ಇದಕ್ಕೆ ಸ್ಪಂದಿಸಿರೋ ಮೋದಿ ಸದ್ಯಕ್ಕೆ ಕೈಲಾದಷ್ಟು ಸಹಕಾರ ನೀಡೋದಾಗಿ ತಿಳಿಸಿದ್ದಾರೆ ಅಂತ ಹೇಳಿದ್ರು.
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕುಡಿಯುವ ನೀರಿನ ಘಟಕದ ಲ್ಯಾಬ್ ಟೆಂಡರ್ ಗೋಲ್ಮಾಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈಗಾಗಲೇ ಎಚ್‍ಕೆ ಪಾಟೀಲ್ ಈ ಪ್ರಕರಣವನ್ನ ಸಿಐಡಿಗೆ ವಹಿಸುತ್ತೇವೆಂದು ಹೇಳಿದ್ದಾರೆ. ಸಿಐಡಿ ತನಿಖೆಗೆ ನಾನೂ ಕೂಡಾ ಸೂಚಿಸಿದ್ದೇನೆ. ನಮ್ಮ ಗಮನಕ್ಕೆ ಬಾರದೆ ಘಟನೆ ನಡೆದಿದೆ ಎಂದು ಹೆಚ್‍ಕೆ ಪಾಟೀಲ್ ತಿಳಿಸಿದ್ರು. ಸಚಿವ ಸಂಪುಟ ಸಭೆಯಲ್ಲೂ ಈ ವಿಷಯ ಹೇಳಿದ್ರು. ಸದ್ಯ ಸಿಐಡಿಗೆ ಹಸ್ತಾಂತರವಾಗಿರೋ ಈ ಪ್ರಕರಣದ ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ರು.
ಇದರ ಜೊತೆಗೆ ವಿವಿಧ ಇಲಾಖೆಗಳ ಹಣವನ್ನು ಬೇನಾಮಿ ಹೆಸರಿನಲ್ಲಿ ಇಟ್ಟಿರೋ ಪ್ರಕರಣವನ್ನು ತನಿಖೆ ನಡೆಸಲು ಸೂಚಿಸಿದ್ದೇನೆ ಅಂತ ಸಿದ್ದರಾಮಯ್ಯ ತಿಳಸಿದ್ರು.