ಕರ್ನಾಟಕ

ಅಪಘಾತದಿಂದ ಜೀವನಕ್ಕೆ ಅಪಾಯವಾಗದಿದ್ದರೂ ಜೀವನವನ್ನು ಬದಲಿಸಿತು: ನಟ ದಿಗಂತ್

Pinterest LinkedIn Tumblr

diganth

ಬೆಂಗಳೂರು: ‘ಟಿಕೆಟ್ ಟು ಬಾಲಿವುಡ್’ ಸಿನೆಮಾದಲ್ಲಿ ನಟಿಸುತ್ತಿದ್ದ ಕನ್ನಡ ನಟ ದಿಗಂತ್ ಅವರಿಗೆ ಫೆಬ್ರವರಿಯಲ್ಲಿ ಅಪಘಾತವಾಗಿ ಕಣ್ಣಿಗೆ ತೀವ್ರ ಪೆಟ್ಟಾದರು, ಅವರ ದೈನಂದಿನ ಜೀವನದ ಚಟುವಟಿಕೆಗಳು ನಿಲ್ಲಲಿಲ್ಲ. ಚಿತ್ರೀಕರಣದ ವೇಳೆಯಲ್ಲಿ ಸಹನಟರೊಬ್ಬರು ಅವರೆಡೆಗೆ ಚೂಪಾದ ವಸ್ತುವೊಂದನ್ನು ಎಸೆದಾಗ ಅದು ಅವರ ಬಲಗಣ್ಣಿನ ಕಾರ್ನಿಯಾಗೆ ತಗುಲಿತ್ತು. “ಜೀವನಕ್ಕೆ ಅಪಾಯವೇನೂ ಆಗಲಿಲ್ಲ ಬದಲಾಗಿ ಅದು ಜೀವನವನ್ನು ಬದಲಿಸಿತು. ಧನಾತ್ಮಕವಾಗಿ ಯೋಚಿಸಿ, ವಿಶಾಲತೆಯಿಂದ ಇದನ್ನು ಎದುರಿಸಬೇಕಾಯಿತು” ಎನ್ನುತ್ತಾರೆ ನಟ.

ನಿಧಾನಕ್ಕೆ ಗುಣಮುಖರಾಗುತ್ತಿರುವ ದಿಗಂತ್ ಕಿರುತೆರೆಗೂ ಪಾದಾರ್ಪಣೆ ಮಾಡುತ್ತಿದ್ದು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

“ಇದೇ ಮೊದಲ ಬಾರಿಗಿ ಟಿವಿ ವಾಹಿನಿಯಿಂದ ಅವಕಾಶ ಬಂದದ್ದು. ಟಿವಿ ಕಾರ್ಯಕ್ರಮಗಳ ತೀರ್ಪುಗಾರರಾಗಿ, ನಿರೂಪಕರಾಗಿ ಹಲವಾರು ನಟರು ಭಾಗಿಯಾಗುವುದನ್ನು ನೋಡಿದ್ದೀನಿ. ಆದುದರಿಂದ ನಾನೂ ಈ ಕೆಲಸಕ್ಕೆ ಮುಂದಾದೆ” ಎನ್ನುವ ದಿಗಂತ್, ಮಾಲಾಶ್ರಿ ಮತ್ತು ಭಾವನಾ ಜೊತೆಗೆ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

“ನನಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ. ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಎಷ್ಟು ತೊಡಗಿಸಿಕೊಂಡು ಶ್ರಮ ಹಾಕಿದ್ದಾರೆ ಎಂಬುದು ನನಗೆ ಮುಖ್ಯ” ಎನ್ನುವ ದಿಗಂತ್ ಮಾರ್ಚ್ ೧೯ರಂದು ಕಾರ್ಯಕ್ರಮ ಮೊದಲ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸದ್ಯಕ್ಕೆ ‘ಚೌಕ’ ಸಿನೆಮಾದ ಚಿತ್ರೀಕರಣ ಮುಗಿಸಲಿರುವ ನಟ ನಾಲ್ಕು ತಿಂಗಳ ನಂತರ ಮುಂದಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. “ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆ ಆಗಬೇಕಿದ. ಅದರ ನಂತರವೇ ಸಿನೆಮಾಗಳಲ್ಲಿ ನಟಿಸಲಿದ್ದೇನೆ. ನನ್ನ ಕಣ್ಣಿನ ಕಾರ್ನಿಯಾ ಮೇಲೆ ಹೊಲಿಗೆಗಳಿವೆ ಮತ್ತು ಅದು ಮಾಗಲು ಮೂರು ತಿಂಗಳು ಹಿಡಿಯುತ್ತದೆ. ಸದ್ಯಕ್ಕೆ ನನ್ನ ಎಡಗಣ್ಣು ಕೂಡ ಸರಿಯಾಗಿ ಕಾಣುತ್ತಿಲ್ಲ. ಕಾಂಟ್ಯಾಕ್ಟ್ ಕೇನ್ಸ್ ಹಾಕಿದ ಮೇಲಷ್ಟೇ ನನಗೆ ಸಂಪೂರ್ಣವಾಗಿ ಕಣ್ಣು ಕಾಣುವುದು. ನನ್ನ ಜೀವನಪೂರ್ತಿ ಅವನ್ನು ಹಾಕಬೇಕಾಗುತ್ತದೆ” ಎನ್ನುತ್ತಾರೆ ನಟ.

ಈ ಪೆಟ್ಟಿನ ಹೊರತಾಗಿಯೂ ‘ಚೌಕ’ ಸಿನೆಮಾದ ಭಾಗವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸುವ ದಿಗಂತ್ “ಅದೃಷ್ಟವಶಾತ್ ಈ ಪಾತ್ರಕ್ಕೆ ಸದ್ಯಕ್ಕೆ ನಾನಿರುವ ಸ್ಥಿತಿಯ ನೋಟದ ಅವಶ್ಯಕತೆ ಇತ್ತು. ಆದುದರಿಂದ ಪೆಟ್ಟಿನ ಜೊತೆಗೇ ಚಿತ್ರೀಕರಣ ಮುಗಿಸಿದ್ದೇನೆ. ಬಾಲಿವುಡ್ ಸಿನೆಮಾದ ೯೦% ಚಿತ್ರೀಕರಣ ಕೂಡ ಮುಗಿಸಿದ್ದೇನೆ” ಎನ್ನುತ್ತಾರೆ.

Write A Comment