ಮುಂಬಯಿ : ಸೆ. 18ರಂದು ಮಲಾಡ್ ಕನ್ನಡ ಸಂಘದ ವತಿಯಿಂದ ಕಾಂದಿವಲಿಪೂರ್ವದ ಅವೆನ್ಯು ಹೋಟೇಲಿನ ಸಭಾಗೃಹದಲ್ಲಿ ಯಕ್ಷಕಲಾ ಕಟೀಲು ಇವರ ಸಂಯೋಜನೆಯಲ್ಲಿ ’ಶಾಂಭವಿ ವಿಜಯ’ ತಾಳಮದ್ದಳೆ ನಡೆಯಿತು.
ಹೋಟೇಲು ಉದ್ಯಮಿ ಸಂಜೀವ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಮಲಾಡ್ ಕನ್ನಡ ಸಂಘದ ಗೌರವ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಅಧ್ಯಕ್ಷ ಹರೀಶ್ ಎನ್. ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಎಸ್. ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಉದ್ಯಮಿಗಳಾದ ಬಾಬು ಎಸ್. ಶೆಟ್ಟಿ, ಮನೋಹರ ಶೆಟ್ಟಿ, ಸಾಧು ಶೆಟ್ಟಿ, ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತ್ ಜಬ್ಬಾರ್ ಸಮೋ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಸಂಜೀವ ಶೆಟ್ಟಿ, ಪದ್ಮನಾಭ ಪಯ್ಯಡೆ, ಅಧ್ಯಕ್ಷ ಹರೀಶ್ ಎನ್. ಶೆಟ್ಟಿ, ಪ್ರಕಾಶ್ ಎಸ್. ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಉದ್ಯಮಿಗಳಾದ ಬಾಬು ಎಸ್. ಶೆಟ್ಟಿ, ಮನೋಹರ ಶೆಟ್ಟಿ, ಸಾಧು ಶೆಟ್ಟಿ, ಮುಂಡ್ಕೂರು ರತ್ನಾಕರ ಶೆಟ್ಟಿ, ರಘುರಾಂ ಶೆಟ್ಟಿ, ದಯಾನಂದ ಶೆಟ್ಟಿ, ನ್ಯಾಯವಾದಿ ಜಗದೀಶ್ ಹೆಗ್ಡೆ, ಅನಿಲ್ ಪೂಜಾರಿ, ಶಂಕರ್ ಆರ್. ಶೆಟ್ಟಿ, ಸೂರಪ್ಪ ಕುಂದರ್, ಪ್ರಕಾಶ್ ಶೆಟ್ಟಿ ಸುರತ್ಕಲ್, ಪದ್ಮನಾಭ ಕಟೀಲು, ಸುಶೀಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದು ಕಲಾವಿದರಿಗೆ ನೆನಪಿನ ಕಾಣಿಕೆಯಿತ್ತು ಗೌರವಿಸಿದರು. ಕಲಾವಿದ ವಾದಿರಾಜ ಕಲ್ಲೂರಾಯ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್