ಮುಂಬಯಿಯ ವಿಟಿ (ಸಿ.ಎಸ್.ಟಿ.)ಸ್ಟೇಶನ್ನಿನ ಪಕ್ಕದ ಫೋರ್ಟ್ ಬಳಿ ಇರುವ “ಮಹೇಶ್ ಲಂಚ್ ಹೋಮ್”ನ ರುಚಿಗೆ ಮನಸೋತು , ತಮ್ಮ ತಾರಾ ಇಮೇಜುಗಳನ್ನೆಲ್ಲ ಬದಿಗಿಟ್ಟು, ಸದ್ದಿಲ್ಲದೆ ಈ ಹೊಟೇಲಿಗೆ ಭೇಟಿ ಇತ್ತು ತಮಗಿಷ್ಟವಾದ ವೆಜ್ , ನಾನ್ ವೆಜ್ , ಸೀ ಫುಡ್ ಖಾದ್ಯಗಳನ್ನು ಸವಿಯುವುದನ್ನು ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ರಾಹುಲ್ ಗಾಂಧಿ, ಸುನೀಲ್ ಗವಾಸ್ಕರ್ ಹಾಗೂ ಇತರ ಚಲನಚಿತ್ರ ಹಾಗೂ ಕ್ರಿಕೆಟ್ ತಾರೆಯರೂ ಎಂದಿಗೂ ತಪ್ಪಿಸುವುದಿಲ್ಲ. ಶಿವ ಸೇನಾ -ನವ ನಿರ್ಮಾಣ ಸೇನಾ ದ ನಾಯಕರುಗಳಾದ ಉದ್ದವ್ -ರಾಜ್ ಠಾಕ್ರೆಗಳಿಗೂ ಸಮಯ ಸಿಕ್ಕಾಗಲೆಲ್ಲ ಮಹೇಶ್ ಲಂಚ್ ಹೋಮ್”ನ ರುಚಿ ಸವಿಯದೆ ಇರುದಿಲ್ಲ! ಇಲ್ಲಿನ ಮೀನಿನ ಬಗೆ ಬಗೆಯ ಪದಾರ್ಥಗಳು ನಮ್ಮೂರಿನವರನ್ನಲ್ಲದೆ, ಇತರ ಬಾಷಿಗರನ್ನು ಹಾಗೂ ವಿದೇಶಿಯರನ್ನು ಆಕರ್ಷಿಸಿದೆ.
ಈ ಹೊಟೇಲಿನ ಮಾಲಕ ಸೂರು ಸಿ. ಕರ್ಕೇರಾ, ದ.ಕ. ಜಿಲ್ಲೆಯವರು. ಪ್ರತೀ ವರ್ಷದಂತೆ ಈ ಸಲವೂ ಫೋರ್ಟ್ ನ ಮಹೇಶ್ ಲಂಚ್ ಹೋಮ್ ನಲ್ಲಿ ’ಸೀ ಫುಡ್ ಫೆಸ್ಟಿವಲ್’ ಆಯೋಜಿಸಿದ್ದು ಸೆ. 30 ರಂದು ಈ ಫೆಸ್ಟಿವಲ್ ಕೊನೆಗೊಳ್ಳಲಿದೆ.
ಫೋರ್ಟ್ ಪರಿಸರಕ್ಕೆ ಬಂದಾಗ ಭೋಜನದ ಸಮಯವಾಗಿದ್ದಲ್ಲಿ ಮಾಂಸಾಹಾರಿ ಮೀನಿನ ಊಟವನ್ನು ಇಷ್ಟಪಡುವವರೆಗೆ ಮಹೇಶ್ ಲಂಚ್ ಹೋಮ್ ನ ನೆನೆಪಾಗುವುದು ಸಹಜ. ಇದೀಗ ಈ ಉತ್ಸವಕ್ಕಾಗಿಯೇ ದೇಶದ ಖ್ಯಾತ ಪಾಕತಜ್ನರು ತಮ್ಮ ಪಾಕ ಶಾಸ್ತ್ರದ ಅನುಭವದಿಂದ ಸುಮಾರು 35 ಬಗೆ ಮೀನಿನ ವಿಶೇಷ ಅಡುಗೆಯನ್ನು ತಯಾರಿಸಿ, ದಿನ ನಿತ್ಯ ಇಂಡೊನೇಷ್ಯಾ, ಮಲೇಶ್ಯಾ, ಥ್ಯಾಲ್ಯಾಂಡ್, ಶ್ರೀಲಂಕಾ, ಕೊಲ್ಲಿ ದೇಶದಿಂದ ಗ್ರಾಹಕರು ಆಗಮಿಸುತ್ತಿದ್ದು ಈಗಾಗಲೇ ಸಾವಿರಾರು ಜನರು ಈ ಮೀನ ಪದಾರ್ಥದ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಸೀ ಪುಡ್ ಉತ್ಸವದಲ್ಲಿ ಮೀನಿನ ವಿವಿಧ ಬಗೆಯ ಫಿಶ್ ತಂದೂರ್, ಡೀಪ್ ಫ್ರೈಡ್, ತವ್ಹಾ, ಕರೀಸ್, ಕಾಂಟಿನೆಂಟಲ್ ಮುಂತಾದ ಪದಾರ್ಥಗಳು ಕೇವಲ ಶೀಮಂತರು ಮಾತ್ರವಲ್ಲದೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಹೇಶ್ ಲಂಚ್ ಹೋಮ್ ಜುಹೂ, ಸಾಕಿನಾಕ, ಪುಣೆ, ಥಾಣೆ ಹಾಗೂ ದುಬಾಯಿಯಲ್ಲೂ ತನ್ನ ಶಾಖೆಯನ್ನು ಪ್ರಾರಂಬಿಸಿದ್ದು ತನ್ನ ಗುಣಮಟ್ಟವನ್ನು ಕಾಪಾಡುದರೊಂದಿಗೆ ಜನಪ್ರಿಯತೆ ಗಳಿಸಿದೆ.
ಹೊಟೇಲಿನ ಸ್ಥಾಪಕ ಸೂರು ಸಿ. ಕರ್ಕೇರಾ ಸಮಾಜ ಸೇವಕರಾಗಿಯೂ, ಕೊಡುಗೈ ದಾನಿಯಾಗಿಯೂ ಗುರುತಿಸಲ್ಪಟ್ಟಿದ್ದು, ಅವರ ಹಾದಿಯಲ್ಲೇ ಅವರ ಪುತ್ರ ಮಹೇಂದ್ರ ಎಸ್. ಕರ್ಕೇರ ಮುಂದುವರಿಯುತ್ತಿದ್ದು ಈ ’ಸೀ ಫುಡ್ ಫೆಸ್ಟಿವಲ್’ ಗೆ ಹೊಸ ರೂಪವನ್ನು ಕೊಟ್ಟಿರುವುದು ಅಭಿನಂದನೀಯ. ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷರೂ ಆದ ಮಹೇಂದ್ರ ಎಸ್. ಕರ್ಕೇರ ಇತ್ತೀಚೆಗೆ ’ಮಿಸ್ ಬಿಲ್ಲವ’ ಕಾರ್ಯಕ್ರಮವನ್ನು ಯಶಸ್ಸಿಯಾಗಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಲೇಖನ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್