ಮುಂಬಯಿ : ನವೋದಯ ಕಲಾ ರಂಗ ಮುಂಬಯಿ ಇದರ 27ನೇ ವಾರ್ಷಿಕೋತ್ಸವವು ಅ. 2 ರಂದು ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರಗಿತು.
ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಶಿವರಾಂ ಸಚ್ಚರಿಪೇಟೆ ಮತ್ತು ವಿಶ್ವನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಕಲಾವಿದನ ಹಿಂದಿರುವ ನೈಜ ಜೀವನಕ್ಕೆ ನಾವು ಸ್ಪಂದಿಸಬೇಕಾಗಿದೆ ಎನ್ನುತ್ತಾ ನವೋದಯ ಕಲಾ ರಂಗದ ಸೇವೆಯನ್ನು ಪ್ರಶಂಸಿಸಿದರು.
ಧರ್ಮದರ್ಶಿ ದೇವು ಪೂಜಾರಿ, ನ್ಯಾ. ಶೇಖರ ಭಂಡಾರಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿಯ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಜಯರಾಂ ಶೆಟ್ಟಿ, ಥಾಣೆ ಬಂಟ್ಸನ ಆರತಿ ವೈ. ಶೆಟ್ಟಿ, ಬಿಲ್ಲವರ ಅಶೋಷಿಯೇಶನಿನ ಸುರೇಶ್ ಕುಮಾರ್ ಕದ್ರಿ, ಉದ್ಯಮಿ ಪ್ರಕಾಶ್ ಶೆಟ್ಟಿ ಮಾತನಾಡುತ್ತಾ ಈ ಸಂಸ್ಥೆಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಚಲನಚಿತ್ರ ನಟ ಬಾಲಕೃಷ್ಣ ಶೆಟ್ಟಿ, ಅಶೋಕ ಸಸಿಹಿತ್ಲು, ಅಧ್ಯಕ್ಷ ಮನೋಹರ ಶೆಟ್ಟಿ ನಂದಳಿಕೆ, ಕಾರ್ಯದರ್ಶಿ ಸುರೇಶ್ ಇರ್ವತ್ತೂರು, ಶಿವು ಶ್ರೀಯಾನ್ ಉಪಸ್ಥಿತರಿದ್ದರು. ಅಶೋಕ್ ಪಕ್ಕಳ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ’ಮದಿಮೆದ ಮನದಾನಿ’ ತುಳು ನಾಟಕ ಪ್ರದರ್ಶನಗೊಂಡಿತು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್