ಮುಂಬಯಿ : ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅ. 2 ರಂದು ಕಾಂದಿವಲಿ ಪೂರ್ವದ ಹೋಟೇಲು ಅವೆನ್ಯು ಸಭಾಗೃಹದಲ್ಲಿ ದಸರಾ ನಿಮಿತ್ತ ಗರ್ಬಾ ನೃತ್ಯ, ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಂಟರ ಸಂಘದ ಅಧ್ಯಕ್ಷರಾದ ಸಿಎ ಶಂಕರ ಬಿ. ಶೆಟ್ಟಿಯವರು ಈ ಸಮಿತಿಯು ಸಂಘದ ಅತ್ಯಂತ ಕ್ರೀಯಾಶೀಲ ಪ್ರಾದೇಶಿಕ ಸಮಿತಿಯಾಗಿದ್ದು ಸಮಾಜದ ಅಭಿವೃದ್ದಿಗೆ ಸಂಘವು ಪೂರಕವಾಗಿದೆ ಎಂದರು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪದ್ಮಾವತಿ ಶೆಟ್ಟಿ ಯವರು ಮಾತನಾಡುತ್ತಾ ಕಳೆದ ಮೂರು ವರ್ಷಗಳ ತನ್ನ ಸೇವೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾ ತನಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.
ಮಹಿಳಾ ವಿಭಾಗಕ್ಕೆ ವಿಶೇಷ ಸಹಕಾರ ನೀಡಿದ ರಘುರಾಮ್ ಶೆಟ್ಟಿ ದಂಪತಿ, ಮುಂಡಪ್ಪ ಪಯ್ಯಡೆ ಮತ್ತು ಲತಾ ಪಿ. ಶೆಟ್ಟಿಯವರನ್ನು ಗೌರವಿಸಲಾಯಿತು.
ಹಿರಿಯ ಉದ್ಯಮಿ ಪದ್ಮನಾಭ ಎಸ್. ಪಯ್ಯಡೆ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಲತಾ ಪಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಉಳ್ತೂರು ಮೋಹನ್ ದಾಸ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಲತಾ ಜಯಾರಾಂ ಶೆಟ್ಟಿ, ಆಶಾ ವಿ. ರೈ, ವಿನೋದಾ ಆರ್. ಚೌಟ, ಮನೋಹರ್ ಶೆಟ್ಟಿ, ವಿಜಯ್ ಭಂಡಾರಿ, ವಿನೋದಾ ಶೆಟ್ಟಿ, ಜ್ಯೋತಿ ಶೆಟ್ಟಿ, ಸವಿತಾ ಸೆಟ್ಟಿ, ರೇಖಾ ಶೆಟ್ಟಿ, ವಿನೋದಾ ಶೆಟ್ಟಿ, ಸುಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಘುನಾಥ್ ಶೆಟ್ಟಿ, ಆಶೋಕ ಶೆಟ್ಟಿ, ಪ್ರೇಂಮ್ ನಾಥ್ ಶೆಟ್ಟಿ, ಪ್ರವೀಣ್ ಶೆಟ್ಟಿ ಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್