ಮುಂಬಯಿ : ಶ್ರೀ ಅಷ್ಟ ವಿನಾಯಕ ಅಯ್ಯಪ್ಪ ಭಕ್ತವೃಂದ, ಎಂ.ಎಚ್.ಬಿ ಕಾಲನಿ, ಬೋರಿವಲಿ ಪಶ್ಚಿಮ ಇದರ ವತಿಯಿಂದ 19ನೇ ವಾರ್ಷಿಕ ಅಯ್ಯಪ್ಪ ಮಾಹಾಪೂಜೆಯು ವಿಶ್ವನಾಥ ಗುರುಸ್ವಾಮಿ, ಕಣ್ಣನ್ ಗುರುಸ್ವಾಮಿ, ಸುರೇಂದ್ರ ಗುರುಸ್ವಾಮಿ ಬೆಳಗಾಂ ಇವರ ಮಾರ್ಗದರ್ಶನದಲ್ಲಿ ಜರಗಿತು.
ಮಂಜುನಾಥ ಗುರುಸ್ವಾಮಿಯವರು ಮಹಾಪೂಜೆಯನ್ನು ನೆರವೇರಿಸಿದರು. ಬೆಳಿಗ್ಗೆ ಸಹಸ್ರ ನಾಮಾರ್ಚನೆ ಬಳಿಕ ಗಣೇಶ್ ಎರ್ಮಾಳ್ ಬಳಗದಿಂದ ಭಕ್ತಿ ಗಾಯನ, ಕಲಾವಿದ ಅಶೋಕ್ ಕೊಡ್ಯಡ್ಕ ನಿರ್ಮಿಸಿದ ಭವ್ಯ ಮಂಟಪದಲ್ಲಿ ಅಯ್ಯಪ್ಪ ಮಾಹಾಪೂಜೆಯು ನೆರವೇರಿತು.
ಸ್ಥಳೀಯ ಸಮಾಜಸೇವಕರು, ರಾಜಕಾರಿಣಿಗಳು, ವಿವಿಧ ತುಳು-ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ನಗರ ಸೇವಕ ಶಿವ ಶೆಟ್ಟಿ ಹಾಗೂ ಕೆ. ವಿ. ಶೆಟ್ಟಿ ಮತ್ತು ಎಲ್ಲಾ ಪದಾಧಿಕಾರಿಗಳು ಈ ಕಾರ್ಯದಲ್ಲಿ ಸಹಕರಿಸಿದ್ದರು. ಪ್ರಸಾದ ರೂಪದಲ್ಲಿ ಅನ್ನದಾನ ನಡೆಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್