ಮುಂಬಯಿ : ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿಯ ದಶಮಾನೋತ್ಸವ ನಿಮಿತ್ತ ಫೆ. 1 ರಂದು ನವಿ ಮುಂಬಯಿಯ ಸಿಡ್ಕೋ ಎಂಪ್ಲಾಯಿಸ್ ಕ್ಲಬ್ ಮೈದಾನದಲ್ಲಿ ನಡೆದ ಕ್ರೀಡೋತ್ಸವವನ್ನು ಉದ್ಯಮಿ ಸಂಜೀವ ಶೆಟ್ಟಿಯವರು ಉದ್ಘಾಟಿಸಿದರು.
ಆರೋಗ್ಯ ವೃದ್ಧಿಸಲು ಕ್ರೀಡೆಯು ಸಹಕಾರಿಯಾಗುತ್ತಿದ್ದು ಇದನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಅವರು ನುಡಿದರು. ಇನ್ನೋರ್ವ ಅತಿಥಿ ಸುಭಾಷ್ ಶೆಟ್ಟಿಯವರು ಕ್ರೀಡಾಕೂಟವನ್ನು ಬೆಲೂನ್ ಹಾರಿಸಿ ಶುಭಾರಂಭಗೊಳಿಸಿದರು.
ಕ್ರೀಡಾಕೂಟವು ದಿನಪೂರ್ತಿ ಯಶಸ್ಸಿಯಾಗಿ ನಡೆಯಿತು. ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಉಪಾಧ್ಯಕ್ಷ ದೇವದಾಸ್ ಕುಲಾಲ್, ಗೌ. ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ರಘು ಮೂಲ್ಯ, ದಯಾನಂದ ಕುಲಾಲ್, ಹರಿಶ್ಚಂದ್ರ ಮೂಲ್ಯ, ಶೇಖರ ಮೂಲ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಮಹಿಳೆಯರಿಗಾಗಿ, ಪುರುಷರಿಗಾಗಿ ಹಾಗೂ ಮಕ್ಕಳಿಗಾಗಿ ವಿವಿಧ ಹೊರಾಂಗಣ ಕ್ರೀಡೆಗಳು ನಡೆದವು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್