ಮುಂಬಯಿ, ಫೆ.08: ಪ್ರತಿಭಾನ್ವಿತರಾದ ಗಾಣಿಗರು ಸಜ್ಜನಶೀಲ ಸದ್ಗುಣವುಳ್ಳ ಸಂಸ್ಕೃತಿ ಪ್ರಿಯರು. ಗಾಣಿಗರು ಸೌಜನ್ಯತೆಯನ್ನು ರೂಪಿಸಿಕೊಂಡ ಸಾಮರಸ್ಯದ ಪ್ರತೀಕರೂ ಹೌದು. ಚಿಕ್ಕ ಸಮುದಾಯವಾದರೂ ತಮ್ಮ ಪರಿಶ್ರಮ ಸಾಧನೀಯ. ಸಜ್ಜನಶೀಲ ಸದ್ಗುಣವುಳ್ಳವ ಈ ಸಮಾಜವು ಭವಿಷ್ಯತ್ತಿನಲ್ಲಿ ತೆರೆಯ ಮರೆಯ ಸಮಾಜವಾಗದೆ ವಿಶ್ವಪ್ರಿಯರಾಗಿ ರಾರಜಿಸುವಂತಾಗಲಿ ಎಂದು ರಿಲಾಯೆಬಲ್ ಗ್ರೂಫ್ ಬಿಲ್ಡರ್ಸ್ ಎಂಡ್ ಡೆವಲಪ್ಪರ್ಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಸದಾನಂದ ಶೆಟ್ಟಿ ನುಡಿದರು.
ಗಾಣಿಗ ಸಮಾಜ ಮುಂಬಯಿ (ರಿ.) ಸಂಸ್ಥೆಯು ಇಂದಿಲ್ಲಿ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಸಂಭ್ರಮಿಸಿದ್ದ ಹದಿನೆಂಟನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಗಾಣಿಗಸಮಾಜ್‌ಮುಂಬಯಿಡಾಟ್‌ಆರ್ಗ್ ವೆಬ್‌ಸೈಟ್ ನ್ನು ಲೋಕಾರ್ಪಣೆಗೈದು ಸಮಾರಂಭ ವನ್ನು ಉದ್ದೇಶಿಸಿ ಸದಾನಂದ ಶೆಟ್ಟಿ ಮಾತನಾಡಿದರು.
ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಜಗನ್ನಾಥ ಎಂ.ಗಾಣಿಗ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಗೌರವ ಅತಿಥಿಗಳಾಗಿ ಉದ್ಯಮಿಗಳಾದ ಬಿ.ಎ ನರಸಿಂಹ ಮೂರ್ತಿ, ಶಕುಂತಳಾ ಸದಾನಂದ ಶೆಟ್ಟಿ, ಎನ್.ಸಂಜೀವ ರಾವ್, ಜಯಕೃಷ್ಣ ಎ.ಶೆಟ್ಟಿ, ಎಂ.ಗೋಪಾಲಕೃಷ್ಣ ಬೆಂಗಳೂರು, ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಬಾರ್ಕೂರು ಅಧ್ಯಕ್ಷ ಕೆ. ಗೋಪಾಲ್, ದ.ಕ.ಜಿಲ್ಲಾ ಸೋಮಕ್ಷತ್ರೀಯ ವೈಷ್ಣವ ಸಮಾಜ ಬೆಂಗಳೂರು ಅಧ್ಯಕ್ಷ ಹೆಚ್.ಟಿ ನರಸಿಂಹ, ಗಾಣಿಗ ಸೇವಾ ಸಮಾಜ ಕುಂದಾಪುರ ಕಾರ್ಯದರ್ಶಿ ಶಿವಾನಂದ ಗಾಣಿಗ, ಕುಮಟಾ ಗಾಣಿಗಾ ಸೇವಾ ಸಂಘದ ಅಧ್ಯಕ್ಷ ಮಾಧವ ನಾರಾಯಣ ಶೆಟ್ಟಿ, ದ.ಕ ಜಿಲ್ಲಾ ಸೋಮಾಕ್ಷತ್ರೀಯ ವೈಷ್ಣವ ಸಮಾಜ ಬೆಂಗಳೂರು ಇದರ ಗೌರವಾಧ್ಯಕ್ಷ ಬಿ.ಎಸ್ ಮಂಜುನಾಥ್ ಮತ್ತು ಗಾಣಿಗ ಸಮಾಜ ಮುಂಬಯಿ ಇದರ ಸ್ಥಾಪಕ ಸದಸ್ಯ ನಾಗೇಶ್ ಎಸ್.ಬಳಿಮನೆ ಉಪಸ್ಥಿತರಿದ್ದರು.
ಜಯಕೃಷ್ಣ ಶೆಟ್ಟಿ ಮಾತನಾಡಿ ಗಾಣಿಗರು ಹುಟ್ಟುವಾಗಲೇ ಪರಂಪರಿಕಾ ವೃತ್ತಿಯನ್ನು ರೂಪಿಸಿಕೊಂಡವರು. ತಮ್ಮ ಅಪ್ರತೀಮ ಪ್ರತಿಭೆಗಳಿಂದ ಗುರುತಿಸಲ್ಪಟ್ಟ ಗಾಣಿಗ ಸಮಾಜದ ಅನೇಕ ಕಲಾವಿದರುಗಳು ವಿಶ್ವಮಾನ್ಯತೆಯ ಧ್ಯೋತಕರಾಗಿದ್ದಾರೆ. ಪ್ರತೀಯೊಂದು ಸಮಾಜಗಳ ಸಂಸ್ಥೆಗಳಿಂದಲೇ ಲೋಕ ಕಲ್ಯಾಣ ಆಗುತ್ತಿದೆ. ಸಮಗ್ರ ಸಮಾಜ ಬಾಂಧವರು ಸುಶಿಕ್ಷಿತರಾದರೆ ಸಮುದಾಯಗಳಲ್ಲಿನ ಭೇದಭಾವಗಳು ನಿರ್ಮೂಲನ ಸಾಧ್ಯವಾಗಿ ಭಾರತವು ಜಗತ್ತಿನ ಬಲಾಢ್ಯ ರಾಷ್ಟ್ರವಾಗಲು ಸಾಧ್ಯ. ಇದಕ್ಕೆ ಪೂರಕವಾಗಿ ಗಾಣಿಗ ಸಮಾಜವು ಉಜ್ವಲ ಭವಿಷ್ಯವುಳ್ಳ ಸಮಾಜವಾಗಿ ಬೆಳೆಯಲಿ ಎಂದು ಶುಭಾರೈಸಿದರು.
ಸಮಾರಂಭದಲ್ಲಿ ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ ಕಛೇರಿ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ಎನ್.ಸಂಜೀವ ರಾವ್ ಮತ್ತು ರತ್ನಾ ಎಸ್.ರಾವ್ ಬೆಂಗಳೂರು, ಚಂದ್ರಶೇಖರ್ ರಾವ್ ಮತ್ತು ವಸಂತಿ ಚಂದ್ರಶೇಖರ್ ಥಾಣೆ, ಕೆ.ಶಾಂತಾರಾಮ ಮೂರ್ತಿ ಮತ್ತು ವಿಶಾಲಾಕ್ಷಿ ಶಾಂತಾರಾಮ, ಗೋಪಾಲಕೃಷ್ಣ ಜಿ.ಗಾಣಿಗ ಮತ್ತು ಸುಮನಾ ಗೋಪಾಲಕೃಷ್ಣ, ಭಾಸ್ಕರ ಎಂ.ಗಾಣಿಗ ಮತ್ತು ವಸಂತಿ ಭಾಸ್ಕರ್, ಮಾಧವ ಎ.ಗಾಣಿಗ ಮತ್ತು ಲಕ್ಷ್ಮೀ ಮಾಧವ್, ಬಾಲಕೃಷ್ಣ ಜಿ.ತೋನ್ಸೆ ಮತ್ತು ಯಶೋಧ ಬಾಲಕೃಷ್ಣ, ಚಂದ್ರಶೇಖರ್ ಆರ್.ಗಾಣಿಗ ಮತ್ತು ಶಕುಂತಳಾ ಚಂದ್ರಶೇಖರ್, ಪದ್ಮನಾಭ ಎನ್.ಗಾಣಿಗ ಮತ್ತು ರತ್ನಾ ಪದ್ಮನಾಭ್, ಜಗದೀಶ್ ಜೆ.ಗಾಣಿಗ ಮತ್ತು ಮಹಾಲಕ್ಷ್ಮೀ ಜಗದೀಶ್, ಯು.ರವಿ ಬಾಬು ರಾವ್, ವಸಂತಿ ಗೋಪಾಲ್ ಉಡುಪಿ ದಂಪತಿಗಳನ್ನು ಹಾಗೂ ಯು.ನಾರಾಯಣ ರಾವ್, ರಾಮ ವಿ.ಗಾಣಿಗ, ಸುಶೀಲಾ ಆನಂದ ಗಾಣಿಗ ಉಡುಪಿ, ಕಮಲಾ ನಾರಾಯಣ.ರಾವ್, ತಾರಾಮತಿ ಎನ್.ಭಟ್ಕಳ್, ಸದಾಶಿವ ಗಾಣಿಗ, ರತ್ನಾಕರ ಎ.ಶೆಟ್ಟಿ ಮತ್ತು ಉಪಸ್ಥಿತ ಅತಿಥಿವರ್ಯ ದಾಣಿಗಳು, ಹಿತೈಷಿಗಳು, ಸಮಾಜೋಭಿವೃದ್ಧಿಗೆ ಅನನ್ಯ ಸೇವೆಗೈದ ಗಾಣಿಗ ಸಮಾಜದ ಮಹಾನೀಯರನ್ನು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸತೀಶ್ ವೆಂಕಟರಮಣ ದುಬಾಯಿ (ಪರವಾಗಿ ಪ್ರಕಾಶ್ ವೆಂಕಟ್ರಾಮಣ್), ಕೃಷ್ಣ ಆರ್.ಗಾಣಿಗ (ರಾಜೇಂದ್ರ ಗಾಣಿಗ), ಅಣ್ಣಪ್ಪಯ್ಯ ಕಲ್ಯಾಣ್ಫುರ್ (ಸದಾನಂದ ಕಲ್ಯಾಣ್ಫುರ್ ದಂಪತಿ), ರುಕ್ಮಣಿ ಎನ್.ಗಾಣಿಗ (ರಮೇಶ್ ಗಾಣಿಗ ದಂಪತಿ), ಶೋಭಾ ವಿ.ಗಾಣಿಗ (ಬದಲಾಗಿ ಯೋಗೇಶ್ ಗಾಣಿಗ) ಸನ್ಮಾನ ಸ್ವೀಕರಿಸಿದರು.
ಸಂಸ್ಥೆಯ ಮಾಜಿ-ಹಾಲಿ ಪದಾಧಿಕಾರಿಗಳನ್ನು ಅತಿಥಿಗಳು ಸನ್ಮಾನಿಸಿದರು ಹಾಗೂ ಅತಿಥಿಗಳು ಸ್ಪರ್ಧಾ ವಿಜೇತರಿಗೆ ಬಹುಮಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಭಾಸ್ಕರ ಎಂ.ಗಾಣಿಗ, ಗೌ ಕೋಶಾಧಿಕಾರಿ ಚಂದ್ರಶೇಖರ ಆರ್.ಗಾಣಿಗ, ಜತೆ ಕಾರ್ಯದರ್ಶಿ ಮಾಧವ ಎ.ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಧ್ಯಕ್ಷ ವಿಜಯೇಂದ್ರ ಗಾಣಿಗ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಗರತ್ನಾ ಜಗನ್ನಾಥ್ ಗಾಣಿಗ, ಉಷಾ ಬಿ.ವಿ ರಾವ್, ಮಹಿಳಾ ವಿಭಾಗದ ಆಶಾ ಹರೀಶ್ ತೋನ್ಸೆ, ಶುಭಾ ಗಣೇಶ್ ಕುತ್ಪಾಡಿ, ಶೋಭಾ ರತ್ನಕರ ಶೆಟ್ಟಿ, ಮಮತಾ ಡಿ.ರಾವ್, ಸುಮಾ ರಾಜೇಶ್ ಕುತ್ಪಾಡಿ, ಆರತಿ ಗಾಣಿಗ, ವೀಣಾ ದಿನೇಶ್ ಗಾಣಿಗ, ಯುವ ವಿಭಾಗದ ಗಣೇಶ್ ಕುತ್ಪಾಡಿ, ರಾಜೇಶ್ ಕುತ್ಪಾಡಿ, ಜಗದೀಶ್ ಗಾಣಿಗ ಸೇರಿದಂತೆ ಮಹಾನಗರದಲ್ಲಿನ ಬಹುತೇಕ ಗಾಣಿಗ ಸಮಾಜ ಬಾಂಧವರು ಭಾಗವಹಿಸಿದ್ದು,ಬಾರಕೂರು ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿಗೆ ಪೂಜಿಸುವುದರೊಂದಿಗೆ ವಾರ್ಷಿಕೋತ್ಸವ ಸಂಭ್ರಮ ಆದಿಗೊಂಡಿತು.
ಬೆಳಿಗ್ಗೆಯಿಂದ ನಡೆಸಲ್ಪಟ್ಟ ವಾರ್ಷಿಕೋತ್ಸವ ಸಂಭ್ರಮಕ್ಕೆ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ವೈ.ಬಾಬುರಾವ್ ಮತ್ತು ದೇವಕಿ ಬಾಬುರಾವ್ ದಂಪತಿ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ರಕ್ಷಿತಾ ವಿ.ಗಾಣಿಗ ಮತ್ತು ವೀಣಾ ಡಿ.ಗಾಣಿಗ ಅವರ ಪ್ರಾರ್ಥನೆಯೊಂದಿಗೆ ಸಂಭ್ರಮವು ಆದಿಗೊಂಡಿತು. ದಿನವಿಡೀ ನಡೆಸಲ್ಪಟ್ಟ ಸಂಭ್ರಮದಲ್ಲಿ ಸಮಾಜದ ಹಿರಿಯ ಮಹಾನೀಯರು, ಸದಸ್ಯರು, ಮಹಿಳೆಯರು, ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಮಮತಾ ಡಿ.ರಾವ್ ಮತ್ತು ದೇವೇಂದ್ರ ಎಸ್.ರಾವ್ ಕಟಪಾಡಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.
ಸಮಾರಂಭದಲ್ಲು ಸಮಾಜದ ಹಿರಿಯ ಮುತ್ಸದ್ಧಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ದಿ ಕುತ್ಪಾಡಿ ಆನಂದ ಎಂ.ಗಾಣಿಗ ಅವರನ್ನು ಸ್ಮರಿಸಲಾಯಿತು. ಉಪಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಸ್ವಾಗತಿಸಿದರು. ಮಹಿಳಾ ಬಳಗ ಸಾಂಪ್ರದಾಯಿಕ ಪ್ರಾರ್ಥನೆಯನ್ನಾಡಿದರು. ಸಂಚಾಲಕ ಶಂಕರ ಹನೆಹಳ್ಳಿ ಸಂಸ್ಥೆಯ ಕಾರ್ಯವೈಖರಿ ಭಿತ್ತರಿಸಿದರು. ನ್ಯಾ ಯು.ಬಾಲಚಂದ್ರ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಗೌ ಪ್ರ ಕಾರ್ಯದರ್ಶಿ ಬಿ.ವಿ ರಾವ್ ಸಭಾ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)