ಮುಂಬಯಿ : ಮಲಾಡ್ ಚಾಂಮುಂಡೇಶ್ವರಿ ಸೇವಾ ಸಮಿತಿಯ 3ನೇ ವಾರ್ಷಿಕ ಮಹಾಪೂಜೆ ಇತ್ತೀಚೆಗೆ ಜರಗಿದ್ದು ಸಂಸದ ಗೋಪಾಲ ಶೆಟ್ಟಿಯವರು ಸಮಿತಿಯ ಗೌರವವನ್ನು ಸ್ವೀಕರಿಸಿ ಧಾರ್ಮಿಕ ಕಾರ್ಯಗಳಿಂದ ಸಮಾಜದ ಸಂಘಟನೆಗಳು ಬಲಗೊಳ್ಳಲಿ ಎಂದರು. ಶಿವಸೇನಾ ಶಾಸಕ ಗಜಾನನ ಕೀರ್ತೀಕರ್ ಅವರು ಕನ್ನಡಿಗರ ಸೇವಾ ಕಾರ್ಯವನ್ನು ಮೆಚ್ಚಿದರು.
ಮುಖ್ಯ ಅತಿಥಿಯಾಗಿ ಇಸ್ತಾಕ್ಯೂ ಜಾಗೀರ್ ದಾರ್ ಹಾಗೂ ಗೌರವ ಅತಿಥಿಯಾಗಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಒಕ್ಕಲಿಗ ಸಂಘದ ಅಧ್ಯಕ್ಷ ರಂಗಪ್ಪ ಸಿ. ಗೌಡ, ಕೆಂಪೇಗೌಡ ಅಸೋಷಿಯೇಶನ್ ಅಧ್ಯಕ್ಷ ಸೋಮಶೇಖರ್ ಗೌಡ, ಸ್ಥಳೀಯ ರಾಜ ಕಾರಿಣಿಗಳು ಉಪಸ್ಥಿತರಿದ್ದರು.
ಧಾರ್ಮಿಕ ಮುಂದಾಳು ರಮೇಶ್ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಮಹಾಲಿಂಗ ಗೌಡ, ಕಾರ್ಯದರ್ಶಿ ನಾಗೇಶ್ ಗೌಡ, ಮಂಜುನಾಥ ಗೌಡ ಹಾಗೂ ಸಮಿತಿಯ ಇತರ ಸದಸ್ಯರು ಅತಿಥಿಗಳನ್ನು ಗೌರವಿಸಿದರು. ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್