ಮುಂಬಯಿ : ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯು ದೇವಾಡಿಗ ಸೆಂಟರ್ ದಾದರ್ ಇಲ್ಲಿ ಜರಗಿತು.
ಸಮಾಜ ಸೇವಕಿ ಪ್ರಜಕ್ತ ಭಟ್ಕರ್ ಸ್ಟ್ರೈಸ್ ಮೆನೇಜ್ ಮೆಂಟ್ ಬಗ್ಗೆ ವ್ಯಾಖ್ಯಾನಗೈದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಸಮನ್ವಯ ಸಮಿತಿಗಳ ಮಹಿಳಾ ಸದಸ್ಯರೊಂದಿಗೆ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಭಾರತಿ ಎಸ್. ನಿಟ್ಟೇಕರ್, ಉಪ ಕಾರ್ಯಧ್ಯಕ್ಷೆ ಸುರೇಖಾ ಎಚ್. ದೇವಾಡಿಗ, ಕಾರ್ಯದರ್ಶಿ ಜಯಂತಿ ಎಂ. ದೇವಾಡಿಗ, ಜತೆ ಕಾರ್ಯದರ್ಶಿ ಲತಾ ವಿ ಮೊಯಿಲಿ, ಸಂಘದ ಜತೆ ಕಾರ್ಯದರ್ಶಿ ಮಾಲಿತಿ ಜೆ ಮೊಯಿಲಿ, ಕ್ರೀಡಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ ಆರ್. ಮೊಯಿಲಿ, ಮಾಜಿ ಕಾರ್ಯಧ್ಯಕ್ಷೆ ಪ್ರಪುಲ್ಲಾ ವಿ ದೇವಾಡಿಗ, ಶಶಿಕಲಾ ಎಸ್. ಮೊಯಿಲಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್