ಮುಂಬೈ

ಮುಸುಕುಧಾರಿ ದುಷ್ಕರ್ಮಿಗಳಿಂದ ನೇವಿ ಮುಂಬೈ ಚರ್ಚ್ ಮೇಲೆ ದಾಳಿ

Pinterest LinkedIn Tumblr

Navy-Mumbai

ಮುಂಬೈ, ಮಾ.22- ಮೂರು ಮೋಟಾರ್ ಬೈಕ್‌ಗಳ ಮೇಲೆ ಬಂದ ಮುಸುಕುಧಾರಿಗಳು ಇಲ್ಲಿನ ನೇವಿ ಮುಂಬೈನ ನ್ಯೂ ಪನ್ವೇಲ್‌ನಲ್ಲಿರುವ ಸೈಂಟ್ ಜಾರ್ಜ್ ಚರ್ಚ್ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿರುವುದಾಗಿ ಪೊಲೀಸ್ ಸಹಾಯಕ ಆಯುಕ್ತ ಎಸ್.ಬಿ.ಸೂರ್ಯವಂಶಿ ತಿಳಿಸಿದ್ದಾರೆ. ಶನಿವಾರ ಈ ಘಟನೆ ನಡೆದಿದ್ದು , ಚರ್ಚ್ ಆವರಣದಲ್ಲಿರುವ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಚರ್ಚ್‌ನಲ್ಲಿದ್ದ ಮೂರ್ತಿಯ ಮೇಲಿನ ಗಾಜಿನ ಹೊದಿಕೆ ಪುಡಿ ಪುಡಿಯಾಗಿದೆ. ಮುಸುಕುಧಾರಿಗಳು ಕಲ್ಲು ಹೊಡೆದಿರುವುದಷ್ಟೇ ಸಿಸಿ ಟಿವಿಯಲ್ಲಿ ದಾಖಲಾಗಿದ್ದು , ಇತರ ಯಾವುದೇ ಚಟುವಟಿಕೆಗಳು ದಾಖಲಾಗಿಲ್ಲ.

ದಾಖಲಾಗಿರುವುದೂ ಕೂಡ ಅಸ್ಪಷ್ಟವಾಗಿದೆ. ಒಟ್ಟಾರೆ ಪ್ರಕರಣ ದಾಖಲಿಸಿಕೊಂಡಿದ್ದು , ತನಿಖೆ ಮುಂದುವರೆಸುತ್ತಿದ್ದೇವೆ ಎಂದು ಸೂರ್ಯ ವಂಶಿ ತಿಳಿಸಿದ್ದಾರೆ. ಮುಂರ್ಬೈನ ಚರ್ಚ್ ಸಮುದಾಯ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಕ್ರೈಸ್ತರಿಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಫಾದರ್ ನಿಗೇಲ್ ಬರೆಟ್ ತಿಳಿಸಿದ್ದಾರೆ.

Write A Comment