ಮುಂಬಯಿ : ’ ಬದಲಾವಣೆಯೇ ಜೀವನದ ಲಕ್ಷಣ. ಶನಿ ದೇವರ ಕೃಪೆಯಿಂದ ಇಂದು ಈ ಸಮಿತಿಯು ಮೂರು ಪೀಳಿಗೆಯನ್ನು ಒಂದುಗೂಡಿಸಿದ್ದು ಅಭಿನಂದನೀಯ” ಎಂದು ಖ್ಯಾತ ವಾಗ್ಮಿ, ಜನಪ್ರಿಯ ಸಂಘಟಕ ರವಿ ರಾ. ಅಂಚನ್ ನುಡಿದರು.
ಮಲಾಡ್ ಪೂರ್ವ, ಇರಾನಿ ಕೊಲನಿಯ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ವತಿಯಿಂದ ಜರಗಿದ 60ನೇ ವಾರ್ಷಿಕ ಮಹಾಪೂಜೆಯ ಕೊನೆಯ ಹಾಗೂ ಮೂರನೇ ದಿನವಾದ ಮಾರ್ಚ್ 22 ರಂದು ಸಂಜೆ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತ್ತಿದ್ದರು. ಮುಂದುವರಿಯುತ್ತಾ, ಇರಾನಿ ಕಾಲನಿಯ ಮಹತ್ವದ ಬಗ್ಗೆ ಮಾತನಾಡಿದ ಅವರು ಮನುಷ್ಯ ಹುಟ್ಟುವಾಗ ಪ್ರತಿಭಾವಂತನಾಗಿ ಹುಟ್ಟುದಿಲ್ಲ ಹೊರತು ಪರಿಸರ ನಮ್ಮನ್ನು ಪ್ರತಿಭಾವಂತರನ್ನಾಗಿ ಮಾಡುತ್ತದೆ. ತನ್ನ ಎಳೆಯ ಪ್ರಾಯದಲ್ಲಿ ಈ ಸಮಿತಿಯಲ್ಲಿ ಮಾಡಿದ ಭಾಷಣ ನನ್ನ ಇಡೀ ಜೀವನದಲ್ಲೇ ಪ್ರಯೋಜನಕಾರಿಯಾಗಿದ್ದು ಇದೀಗ ನಾನು ಹಲವಾರು ಬಾಷೆಯಲ್ಲಿಯೂ, ಎಲ್ಲಿಯೂ ಬಾಷಣ ಮಾಡಬಲ್ಲೆ. ಇದಕ್ಕೆ ಕಾರಣ ಈ ಶನಿ ಮಹಾತ್ಮ ಪೂಜಾ ಸಮಿತಿ. ಸಂಸ್ಕೃತಿ, ಸಭ್ಯತೆಯನ್ನು ನಾವು ಇಲ್ಲಿ ಕಲಿಯಬಹುದಾಗಿದೆ. ಇಲ್ಲಿನ ಯುವ ಜನಾಂಗಕ್ಕೆ ನನ್ನಿಂದ ಎನಾದರೂ ಮಾರ್ಗದರ್ಶನ ಬೇಕೆಂದಿದ್ದಲ್ಲಿ ಶಿಸ್ತಿನ ವಾತಾವರಣದೊಂದಿಗೆ ಅದಕ್ಕೆ ನಾನು ಸಹಕರಿಸಬಲ್ಲೆ ಎಂದರು.
ಮುಖ್ಯ ಅತಿಥಿಯಾಗಿ ನಾಂದೇಡ್ ವಘಾಲ ನಗರ ಪಾಲಿಕೆಯ ಕಮಿಷನರ್ ಸುಶಿಲ್ ಡಿ. ಕೊಡವೇಕರ್, ಐ ಎ ಎಸ್, ಉಪಸ್ಥಿತರಿದ್ದು ಅವರನ್ನು ಡಿಂಪಲ್ ಕುಕ್ಯಾನ್ ಪರಿಚಯಿಸಿದರು. ಕೊಡವೇಕರ್ ಅವರೊಂದಿಗೆ ತನ್ನ ಮಾತೃಶ್ರೀಯವರೂ ಆಗಮಿಸಿದ್ದರು. ಗೌರವ ಅತಿಥಿಯಾಗಿ ಆಗಮಿಸಿದ ಉದ್ಯಮಿ ರಾಜೇಶ್ ಪಾಟೀಲ್ ರನ್ನು ವಿದ್ಯಲತಾ ಶೆಟ್ಟಿಯವರು ಹಾಗೂ ರವಿ ರಾ. ಅಂಚನ್ ರನ್ನು ಸವಿತಾ ದಾಸ್ ಅವರು ಪರಿಚಯಿಸಿದರು.
ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಯಸಸ್ಶಿಯನ್ನು ಗಳಿಸಿದವರನ್ನು ವೇದಿಕೆಯಲ್ಲಿದ್ದ ಗಣ್ಯರಾದ ರವಿ ರಾ. ಅಂಚನ್, ವೇದ ಮೂರ್ತಿ ಕೆ. ಗೋವಿಂದ ಭಟ್, ಬಿ. ದಿವಾಕರ ಡಿ. ಶೆಟ್ಟಿ, ರಾಜೇಶ್ ಪಾಟೀಲ್ ಅವರು ಗೌರವಿಸಿದರು.
ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಬಿ. ದಿವಾಕರ ಡಿ. ಶೆಟ್ಟಿ ಯವರು ಎಲ್ಲರನ್ನು ಸ್ವಾಗತಿಸಿದರು. ವಿದ್ಯಾ ಶೆಟ್ಟಿಯವರು ಸಮಿತಿಯ ಚಟುವಟಿಕೆಗಳ ಮಾಹಿತಿಯಿತ್ತರು. ಜಯ ಬಂಗೇರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರದ್ಧಾ ಅವರು ಧನ್ಯವಾದ ಸಮರ್ಪಿಸಿದರು.
ಮುಂಜಾನೆ 8 ಗಂಟೆಯಿಂದ ದಿನಪೂರ್ತಿ ಧಾರ್ಮಿಕ ಕಾರ್ಯಕ್ರಮಗಳು ನಂತರ ಗಣೇಶ್ ಎರ್ಮಾಳ್ ತಂಡದವರಿಂದ ಭಕ್ತಿರಸಮಂಜರಿ ಕಾರ್ಯಕ್ರಮವು ನಡೆಯಿತು.
ಮಹಾಪೂಜೆಯು ಮಾ. 20ರಂದು ಪೂರ್ವಾಹ್ನ ಸಾಮೂಹಿಕ ಪ್ರಾರ್ಥನೆ ಮತ್ತು ತೋರಣ ಮುಹೂರ್ತದೊಂದಿಗೆ ಶುಭಾರಂಭಗೊಂಡಿತು. ಬಳಿಕ, ಗಣ ಹೋಮ, ನವಕ ಪ್ರಧಾನ ಹೋಮ, ಪಂಚಾಮೃತ, ನವಗ್ರಹ ಶಾಂತಿ, ಶನಿ ಶಾಂತಿ, ನವಕ ಕಲಶಾಭಿಷೇಕ ಹಾಗೂ ಮಧ್ಯಾಹ್ನ ಮಹಾಪೂಜೆಯು ಜರಗಿತು. ಅಪರಾಹ್ನ ಶೋಭಾ ಯಾತ್ರೆಯು ಶ್ರೀ ಕ್ಷೇತ್ರದಿಂದ ಪ್ರಾರಂಭಗೊಂಡು ಕೈಲಾಸ ಪುರಿ, ಹನುಮಾನ್ ಮಂದಿರ, ಗೋವಿಂದ ನಗರ, ಅಂಭಾಮಾತ ಮಂದಿರ, ಸತ್ಸಂಗ ಭಾರತಿ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲಪಿದ್ದು ಈ ಶೋಭಾ ಯಾತ್ರೆಯಲ್ಲಿ ನೂರಾರು ಮಂದಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ನಂತರ ದುರ್ಗಾ ನಮಸ್ಕಾರ ಹಾಗೂ ಪ್ರಸಾದ ವಿತರಣೆಯು ನಡೆಯಿತು.
ಮಾರ್ಚ್ 21 ರಂದು ಬೆಳಗ್ಗೆ ಗಣಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮವು ಆರಂಭಗೊಂಡಿದ್ದು, ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಇಂದ್ರಾದಿ ದಿಕ್ಪಾಲಕರ ಹೋಮ, ಅಶ್ವತ ಪೂಜೆ, ಮಹಾಪ್ರಸಾದ ಪೂಜೆ, ಪಲ್ಲಪೂಜೆ, ಮಹಾಮಂಗಳಾರತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಮಧ್ಯೆ ಬೋರಿವಲಿ ಮಹಿಷಮರ್ಧಿನಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಅಪರಾಹ್ನ ಕಲಶ ಪ್ರತಿಷ್ಟಾಪನೆ, ಬಲಿಮೂರ್ತಿ ಮೆರವಣಿಗೆ, ಶನಿಗ್ರಂಥ ಪಾರಾಯಣ, ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಸಂಜೆ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರುಗಳಿಂದ ’ಕಾರಿಂಜ ಕಾಂಜವ” ಯಕ್ಷಗಾನ ಪ್ರದರ್ಶನವಿತ್ತು.
ವೇದ ಮೂರ್ತಿ ಕೆ. ಗೋವಿಂದ ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಮಹಾಪೂಜೆಯ ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಗಣ್ಯರು, ಉದ್ಯಮಿಗಳು, ರಾಜಕಾರಿಣಿಗಳು, ಸಮಾಜಸೇವಕರು ಹಾಗೂ ಭಕ್ತಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು.
ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಬಿ. ದಿವಾಕರ ಡಿ. ಶೆಟ್ಟಿ, ಗೌ. ಕಾರ್ಯದರ್ಶಿ ಎಚ್. ಎಸ್. ಕರ್ಕೇರ, ಜೊತೆ ಕಾರ್ಯದರ್ಶಿ ಎಸ್. ಎನ್. ಹೆಜ್ಮಾಡಿ, ಗೌ. ಕೋಶಾಧಿಕಾರಿ ಎಮ್. ಜಿ. ಬಂಗೇರ, ಜೊತೆ ಕೋಶಾಧಿಕಾರಿ ಕೆ. ಎನ್. ಸಾಲ್ಯಾನ್, ಸಮಿತಿಯ ಸದಸ್ಯರುಗಳಾದ ಎಸ್. ಪಿ. ದೇವಾಡಿಗ, ಎಸ್. ಯು. ಬಂಗೇರ, ಕೆ. ಎನ್. ಸಿ. ಸಾಲ್ಯಾನ್, ಎಸ್. ಎ. ಸಾಲ್ಯಾನ್, ಎಮ್. ಎನ್. ಕೋಟ್ಯಾನ್, ಪಿ. ಆರ್. ಅಮೀನ್, ಆರ್. ವೈ. ಪುತ್ರನ್, ಬಿ. ಎಚ್. ಹೆಜ್ಮಾಡಿ, ಎಂ. ಎನ್. ಸುವರ್ಣ, ಅರ್ಚಕರಾದ ಸುಧಾಕರ ಎಂ. ಶೆಟ್ಟಿ, ಭುವಾಜಿ ಎಸ್. ಯು. ಬಂಗೇರ ವಜ್ರಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ದೀನನಾಥ ಜಿ. ಪ್ರಭು, ಉಪಕಾರ್ಯಧ್ಯಕ್ಷರಾದ ಎಸ್. ಯು. ಬಂಗೇರ, ವಿಜಯ ಕುಕ್ಯಾನ್, ಅತುಲ್ ಓಜಾ, ಸದಸ್ಯರುಗಳಾದ ಪ್ರದೀಪ್ ಎಸ್. ರುಯಿಯಾ, ಎ. ಡಿ. ಗಾರ್ಡ್, ಶ್ರೀಧರ ಜಿ. ಬಂಗೇರ, ಜಯ ಎಂ. ಬಂಗೇರ, ಆರ್. ವೈ. ಪುತ್ರನ್, ಸಮಿತಿಯ ಮಹಿಳಾ ಕಾರ್ಯಕರ್ತರು ಹಾಗೂ ಭಕ್ತಾಭಿಮಾನಿಗಳು ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು.
ವರದಿ : ಈಶ್ವರ ಎಂ. ಐಲ್