ಮುಂಬಯಿ : ನಗರದ ಹಿರಿಯ ಸಂಘಟನೆಯಾದ ಶ್ರೀಮಧ್ಭಾರತ ಮಂಡಳಿಯ ಅಂಧೇರಿ ಪ. ವೀರದೇಸಾಯಿ ಪರಿಸರದಲ್ಲಿನ ಶ್ರೀ ಲಕ್ಷೀನಾರಾಯಣ ಮಂದಿರದ 13ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮಾ. 26 ರಂದು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಇಲ್ಲಿನ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಿತು.
ಪೂಜೆಯೊಂದಿಗೆ ಆರಂಭಗೊಂಡು, ಸುರೇಶ್ ಭಟ್ ಅವರಿಂದ ಬಲಿ ಉತ್ಸವ, ದಿನೇಶ್ ಕೋಟ್ಯಾನ್ ಬಳಗದವರಿಂದ ನಾದಸ್ವರ, ಚೆಂಡೆ, ಕೊಂಬು, ವಾದ್ಯಗಳೊಂದಿಗೆ ಮಾಹಾಪೂಜೆಯು ನೆರವೇರಿತು. ಸಾವಿರಾರು ಭಕ್ತರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು.
ಬಳಿಕ ನಡೆದ ಸಂಗೀತ ಹಾಗೂ ಸಾಂಸ್ಕೃತಿಯ ಕಾರ್ಯಕ್ರಮವನ್ನು ಉದ್ಯಮಿ ಸಂಜೀವ ಕೆ. ಬಂಗೇರ ಉದ್ಘಾಟಿಸಿದರು. ಅಧ್ಯಷ ಜಗನ್ನಾಥ ಪುತ್ರನ್, ಉಪಾಧ್ಯಕ್ಷರುಗಳಾದ ರಘುನಾಥ ಬಿ, ಕುಂದರ್, ಸಂಜೀವ ಬಿ. ಚಂದನ್, ಗೌ. ಪ್ರ. ಕಾರ್ಯದರ್ಶಿ ವಿ. ಕೆ. ಸುವರ್ಣ, ಜೊತೆ ಕಾರ್ಯದರ್ಶಿ ಲೋಕನಾಥ ಪಿ ಕಾಂಚನ್, ಗೌ. ಕೋಶಾಧಿಕಾರಿ ಕೇಶವ ಪುತ್ರನ್, ಜೊತೆಕೋಶಾಧಿಕಾರಿಗಳಾದ ಆನಂದ ಎಲ್. ಕರ್ಕೇರ, ನಾರಾಯಣ ಪಿ ಸುವರ್ಣ, ಪಾರುಪತ್ಯಗಾರರಾದ ಜೆ. ಪಿ. ಪುತ್ರನ್ ಸಮಿತಿಯ ಸದಸ್ಯರುಗಳಾದ ನಾಗೇಶ್ ಮೆಂಡನ್, ಸಂಜೀವ ಸಾಲ್ಯಾನ್, ಲೋಕಾನಾಥ ಓಡಿ ಮೆಂಡನ್, ಗಂಗಾಧರ ಸಾಲ್ಯಾನ್, ಸುರೇಂದ್ರನಾಥ ಹಳೆಯಂಗಡಿ, ಶಶಿಕುಮಾರ್ ಕೋಟ್ಯಾನ್, ಹರಿಶ್ಚಂದ್ರ ಕಾಂಚನ್, ಶ್ಯಾಮ ಪುತ್ರನ್, ಹರಿಶ್ಚಂದ್ರ ಸಿ. ಕಾಂಚನ್, ಮಹಿಳಾ ಸದಸ್ಯೆಯರು, ಮತ್ತಿತರು ಪೂಜಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಪೂಜೆಯ ಉಸ್ತುವಾರಿಯನ್ನು ಪೂಜಾ ಮೇಲ್ವಿಚಾರಕರಾದ ವಾಸು ಉಪ್ಪೂರು, ಗಂಗಾಧರ ಸಾಲ್ಯಾನ್, ಲೋಕಾನಾಥ ಓಡಿ ಮೆಂಡನ್ ನೋಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಣೇಶ್ ಎರ್ಮಾಳ್ ಬಳಗದವರಿಂದ ಭಕ್ತಿ ರಾಗ ಸಂಗಮ ದೀಕ್ಷಾ ದೇವಾಡಿಗ, ಸರಸ್ವತಿ ಮೆಂಡನ್ ಮತ್ತು ದೃತಿ ಇಡ್ಯಾ ಇವರು ಭರತ ನಾಟ್ಯವನ್ನು ಸಾದರಪಡಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್