ಮುಂಬಯಿ : ತೀಯಾ ಸಮಾಜ ಮುಂಬಯಿಯ ಪಶ್ಚಿಮ ವಲಯದ ಆಶ್ರಯದಲ್ಲಿ ಮಹಿಳಾ ವಿಭಾಗದ ಸಹಯೋಗದೊಂದಿಗೆ ಎ.14ರಂದು ವಾರ್ಷಿಕ ಬಿಸು ಕಣಿಯ ಪೂಜೆಯನ್ನು ಜೋಗೇಶ್ವರಿ ಪೂರ್ವದ ಸಿದ್ದಿವಿನಾಯಕ ಮಂದಿರದಲ್ಲಿ ಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿಸಲಾಯಿತು.
ತೀಯಾ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಬೆಳ್ಚಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಆಚರಿಸುತ್ತಾ ಬಂದಿರುವ ಈ ಬಿಸು ಕಣಿ ಹಬ್ಬದ ಮಹತ್ವವನ್ನು ತಿಳಿಸಿದರು. ಸಮಾಜದ ಮಾಜಿ ಟ್ರಸ್ಟಿ ಗೋಪಾಲ ಸಾಲ್ಯಾನ್ ಅವರು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ತೀಯಾ ಸಮಾಜದ ಪಶ್ಚಿಮ ವಲಯದ ಕಾರ್ಯಾಧ್ಯಕ್ಷ, ಸಮಾಜದ ಧಾರ್ಮಿಕ ಮುಂದಾಳು ಗಂಗಾಧರ ಕಲ್ಲಾಡಿಯವರು ಪೂಜಾ ವಿಧಿಯನ್ನು ನೆರವೇರಿಸಿದರು. ಸಮಾಜದ ಉಪಸಮಿತಿಗಳ ಪ್ರಮುಖರಾದ ದಿವ್ಯಾ ಆರ್. ಕೋಟ್ಯಾನ್, ತಿಮ್ಮಪ್ಪ ಬಂಗೇರ, ಶ್ರೀಧರ ಸುವರ್ಣ, ಬಾಬು ಬೆಳ್ಚಡ, ಸಮಾಜದ ಪ್ರಧಾನ ಕಾರ್ಯದರ್ಶಿ ಐಲ್ ಬಾಬು, ಕೋಶಾಧಿಕಾರಿ ರಮೇಶ್ ಉಳ್ಳಾಲ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಸುಧಾಕರ ಉಚ್ಚಿಲ್, ಪದ್ಮನಾಭ ಸುವರ್ಣ, ಚಂದ್ರಶೇಖರ ಸಾಲ್ಯಾನ್, ಚಂದ್ರಾ ಸುವರ್ಣ ಮಾತ್ರವಲ್ಲದೆ ಸ್ಥಳೀಯ ಸಮಿತಿ ಹಾಗೂ ಉಪಸಮಿತಿಗಳ ಇತರ ಪದಾಧಿಕಾರಿಗಳು, ಸದಸ್ಯರುಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್