ಮುಂಬೈ

ಪಂಕಜ್ ಮುಂಡೆ ಹಗರಣ: ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್‌ಗೆ ಜೀವಬೆದರಿಕೆ ಕರೆ

Pinterest LinkedIn Tumblr

pankajಮುಂಬೈ:  ಟೆಂಡರ್‌ಗಳನ್ನು ಆಹ್ವಾನಿಸದೆ 206 ಕೋಟಿ ರೂಪಾಯಿಗಳ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಪಂಕಜ್ ಮುಂಡೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ ನಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ದೂರಿದ್ದಾರೆ.

ಕಳೆದ ಸಂಜೆಯಿಂದ ಸುಮಾರು 40 ಬೆದರಿಕೆ ಕರೆಗಳು ಬಂದಿವೆ. ಕೆಲವರು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರೆ ಕೆಲವರು ಮುಂಡೆಯವರ ಕ್ಷಮೆಯಾಚಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಸಾವಂತ್ ತಿಳಿಸಿದ್ದಾರೆ.

ಬೆದರಿಕೆ ಕರೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಕೆಲ ಬೆದರಿಕೆ ಕರೆಗಳು ಬಂದ ನಂತರ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರಿಗೆ ದೂರವಾಮಿ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ವಿವರಿಸಿದ್ದಾರೆ.

ತಾತ್ಕಾಲಿಕವಾಗಿ ನನ್ನ ನಿವಾಸಕ್ಕೆ ಇಬ್ಬರು ಪೇದೆಗಳ ಭದ್ರತೆ ನೀಡಲಾಗಿದೆ.ನಾಳೆ ಬೆದರಿಕೆ ಕರೆಗಳಱ ಬಗ್ಗೆ ಅಧಿಕೃತವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಸಾವಂತ್ ಹೇಳಿದ್ದಾರೆ.

Write A Comment