ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈಯಿಂದ ಆಪ್ರಾಪ್ತ ಬಾಲಕಿಯರು ಸೇರಿದಂತೆ ಪ್ರತಿ ತಿಂಗಳು ಸರಾಸರಿ 884 ಮಂದಿ ನಾಪತ್ತೆಯಾಗುತ್ತಿರುವ ಆಘಾತಕಾರಿ ಮಾಹಿತಿ ಶುಕ್ರವಾರ ಹೊರ ಬಿದ್ದಿದೆ.
ಮುಂಬೈ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಮುಂಬೈ ಮಹಾನಗರದಲ್ಲಿ ಕಳೆದ 10 ವರ್ಷಗಳಲ್ಲಿ ಒಟ್ಟು 1, 10, 547 ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ 1,00439 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, 10, 108 ಮಂದಿ ಇನ್ನೂ ಪತ್ತೆಯಾಗಿಲ್ಲ.
ಮುಂಬೈ ಅಪರಾಧ ವಿಭಾಗದ ಪೊಲೀಸರು ಜನವರಿ 2005ರಿಂದ ಮೇ 2015ರವರೆಗಿನ ನಾಪತ್ತೆ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರೇ ಹೆಚ್ಚು ನಾಪತ್ತೆಯಾಗಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಒಟ್ಟು 18, 547 ಬಾಲಕಿಯರು, 37,603 ಮಹಿಳೆಯರು, 17,195 ಬಾಲಕರು ಮತ್ತು 37, 202 ಪುರುಷರ ನಾಪತ್ತೆ ಪ್ರಕರಣಗಳು ದಾಖಲಾಗಿವೆ.