ನವೀ ಮುಂಬಯಿ: ಪುಣೆ- ಮುಂಬಯಿ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಅಡೋಶಿ ಟನಲ್ ಬಳಿ ಮೂರು ಕಾರುಗಳ ಮೇಲೆ ಬಂಡೆಗಳು ಉರುಳಿ ಮೂವರು ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಪುಣೆ ಎಕ್ಸ್‌ಪ್ರೆಸ್‌ವೇನ ಪನ್ವೇಲ್‌ನಿಂದ 30 ಕಿ.ಮೀ. ದೂರದ ಅಡೋಶಿ ಟನಲ್ ಬಳಿ ಭಾನುವಾರ ಮಧ್ಯಾಹ್ನ 12.15ಕ್ಕೆ ಭಾರಿ ಕುಸಿತ ಸಂಭವಿಸಿದ ನಂತರ ರಸ್ತೆ ಮೇಲೆ ಬಂಡೆಗಳು ಉರುಳಿ ಸಂಚಾರಿ ದಟ್ಟಣೆ ಉಂಟಾಗಿದೆ. ಸದ್ಯ ಮುಂಬಯಿ -ಪುಣೆ ಹಳೆಯ ಹೆದ್ದಾರಿಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಎರಡು ಪಥಗಳ ಮೇಲೆ ಕಲ್ಲು ಬಂಡೆಗಳು ಉರುಳಿದ್ದು, ಅವಶೇಷಗಳ ಅಡಿಯಲ್ಲಿ ಒಂದು ಕಾರು ಸಿಲುಕಿರಬಹುದು ಎಂದು ಎಕ್ಸ್‌ಪ್ರೆಸ್‌ವೇ ನಿಯಂತ್ರಣ ಕೊಠಡಿ ಮೂಲಗಳು ಆತಂಕ ವ್ಯಕ್ತಪಡಿಸಿವೆ.