ನಾಗ್ಪುರ್: 1993 ಮುಂಬೈ ಸರಣಿ ಸ್ಫೋಟ ಪ್ರಕರಣದ ದೋಷಿ ಯಾಕೂಬ್ ಮೆಮನ್ ನ್ನು ನಾಗ್ಪುರ ಜೈಲಿನಲ್ಲಿ ಗುರುವಾರ ಬೆಳಗ್ಗೆ ಗಲ್ಲಿಗೇರಿಸಲಾಗಿದೆ.
ಗಲ್ಲಿಗೇರಿಸುವ ಮುನ್ನ ಯಾಕೂಬ್‌ನ ಅಂತಿಮ ಕ್ಷಣಗಳು ಹೀಗಿದ್ದವು
ಮುಂಜಾನೆ 3.30ಕ್ಕೆ ಎದ್ದ ಆತ ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ದಾನೆ.
ಅದಾದ ನಂತರ ನಮಾಜ್ ಮಾಡಿದ ಆತ ಖುರಾನ್ ಪಠಿಸಿದ್ದಾನೆ.
ಶುಭ್ರ ಬಟ್ಟೆಗಳನ್ನು ಧರಿಸಿದ ಆತನಿಗೆ ಅವನಿಷ್ಟದ ಉಪಾಹಾರವನ್ನು ನೀಡಲಾಯಿತು.
ಇವತ್ತು ಆತನ 54ನೇ ಹುಟ್ಟುಹಬ್ಬ, ಬದುಕಿನ ಕೊನೆಯ ದಿನವೂ ಆಗಿದೆ.