ಮುಂಬೈ, ಆ.8-ದೆಹಲಿ ಮೂಲದ ಇಂಡಿಗೋ ವಿಮಾನವೊಂದು ತಾಂತ್ರಿಕ ತೊಂದರೆಯಿಂದಾಗಿ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಕೆಳಗಿಳಿದ ಘಟನೆ ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು.
ವಿಮಾನದಲ್ಲಿದ್ದ ಎಲ್ಲಾ 160 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಂದ ದೆಹಲಿಗೆ ತೆರಳಿ, ನಂತರ ಪಾಟ್ನಾಕ್ಕೆ ತೆರಳಬೇಕಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನ ಬೆಳಗ್ಗೆ 9.30ರ ಬದಲಿಗೆ 9.45ಕ್ಕೆ ಇಲ್ಲಿಂದ ಹೊರಟಿತ್ತು. ಸಿಬ್ಬಂದಿ ಸೇರಿ ಒಟ್ಟು 160 ಜನ ವಿಮಾನದಲ್ಲಿದ್ದರು. ವಿಮಾನ ಟೇಕ್‌ಆಫ್ ಆಗಿ 20 ನಿಮಿಷಗಳಲ್ಲಿ ವಿಮಾನ ನಿಲ್ದಾಣಕ್ಕೆ ವಾಪಾಸಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.