ಮುಂಬೈ: ನಗರದ ಬಾಂದ್ರಾ ಪ್ರದೇಶದಲ್ಲಿರುವ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆಯವರ ಮಾತೋಶ್ರೀ ನಿವಾಸಕ್ಕೆ ಚಾಕು ಹೊಂದಿದ್ದ ವ್ಯಕ್ತಿಯೊಬ್ಬ ಪ್ರವೇಶಿಸುತ್ತಿರುವಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ರಾಮ್ ಶರ್ಮಾ ತನ್ನ ಬೆಂಬಲಿಗರೊಂದಿಗೆ ಠಾಕ್ರೆ ನಿವಾಸಕ್ಕೆ ತೆರಳಿದ್ದು ಬಹುತೇಕವಾಗಿ ಶಿವಸೇನೆ ಪಕ್ಷವನ್ನು ಸೇರಲು ಬಯಸಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ರಾಮ್‌ಶರ್ಮಾ ಜೇಬಿನಲ್ಲಿ ಚಾಕು ಪತ್ತೆಯಾಗಿದ್ದರಿಂದ ಠಾಕ್ರೆ ನಿವಾಸದೊಳಗೆ ಪ್ರವೇಶಿಸಲು ಪೊಲೀಸರು ಅನುಮತಿ ನೀಡಲಿಲ್ಲ ಎನ್ನಲಾಗಿದೆ.
ರಾಮ್‌ಶರ್ಮಾನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಮಾತೋಶ್ರೀ ನಿವಾಸದೊಳಗೆ ಚಾಕು ತೆಗೆದುಕೊಂಡ ಹೋದ ಉದ್ದೇಶದ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎಂದು ಖೇರ್‌ವಾಡಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸುಜಾತಾ ಪಾಟೀಲ್ ತಿಳಿಸಿದ್ದಾರೆ.
ಪ್ರಸ್ತುತ ರಾಮ್‌ಶರ್ಮಾನ ವಿಚಾರಣೆ ನಡೆಯುತ್ತಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಬೇಕೋ ಅಥವಾ ಬಂಧಿಸಬೇಕೋ ಎನ್ನುವ ನಿರ್ಧಾರವನ್ನು ಹಿರಿಯ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.