ಮುಂಬೈ

ಯುವತಿಗೆ ಲೈಂಗಿಕ ಕಿರುಕುಳ ನೀಡಿದವನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

Pinterest LinkedIn Tumblr

661108-molesterಮುಂಬೈ: ಮುಂಬೈ ಲೋಕಲ್ ಟ್ರೈನ್ ನ ಲೇಡಿಸ್ ಕಂಪಾರ್ಟ್ಮೆಂಟಿನಲ್ಲಿ ಪ್ರಯಾಣಿಸುತ್ತಿದ್ದ 22 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಗುರುವಾರದಂದು ಈ ಘಟನೆ ನಡೆದಿದ್ದು ಚರ್ಚ್ ಗೇಟ್ ಗೆ ಹೋಗುವ ಸಲುವಾಗಿ ಈ ಯುವತಿ ರಾತ್ರಿ 11 ಗಂಟೆ ಸುಮಾರಿಗೆ ಮಲಾಡ್ ಸ್ಟೇಷನ್ ನಲ್ಲಿ ಲೇಡಿಸ್ ಕಂಪಾರ್ಟ್ಮೆಂಟ್ ಏರಿದ್ದರು. ಪದೇ ಪದೇ ಲೈಂಗಿಕ ಕಿರುಕುಳದ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆ ಬಳಿಕ ಲೇಡಿಸ್ ಕಂಪಾರ್ಟ್ಮೆಂಟ್ ಗೆ ಪೊಲೀಸ್ ರಕ್ಷಣೆ ಇರಬೇಕೆಂದು ಆದೇಶಿಸಿದ್ದರೂ ಅಲ್ಲಿ ಯಾರೂ ಇರಲಿಲ್ಲವೆನ್ನಲಾಗಿದೆ.

ಈ ರೈಲು ಗ್ರಾಂಟ್ ರೋಡ್ ನಿಲ್ದಾಣ ತಲುಪಿದ ವೇಳೆ ಲೇಡಿಸ್ ಕಂಪಾರ್ಟ್ಮೆಂಟ್ ಏರಿದ ಸುಮಾರು 20 ವರ್ಷದ ಯುವಕ, ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಅಲ್ಲದೇ ಆಕೆಯ ಬಟ್ಟೆಯನ್ನೂ ಹರಿದು ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಕಿರುಚಿದರೂ ಯಾವುದೇ ಉಪಯೋಗವಾಗಿಲ್ಲ.

ಬಳಿಕ ಮರೀನ್ ಸಿಗ್ನಲ್ ನಲ್ಲಿ ರೈಲು ನಿಧಾನವಾಗುತ್ತಿದ್ದಂತೆಯೇ ಯುವತಿ ಹಾರಿ ತಪ್ಪಿಸಿಕೊಂಡಿದ್ದಾಳೆ. ಅಲ್ಲಿ ಜನರಿದ್ದ ಕಾರಣ ಕಾಮುಕ ಪರಾರಿಯಾಗಿದ್ದಾನೆ. ಯುವತಿ ಕೂಡಲೇ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅವರು ಯುವಕನ ಸಿಸಿ ಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಲೇಡಿಸ್ ಕಂಪಾರ್ಟ್ಮೆಂಟ್ ನಲ್ಲಿ ಪೊಲೀಸ್ ರಕ್ಷಣೆ ಇಲ್ಲದಿರುವುದರ ಕುರಿತು ತನಿಖೆ ಆರಂಭಿಸಿದ್ದಾರೆ.

Write A Comment