ಮುಂಬೈ

ತೀಸ್ತಾ ಸೆಟಲ್ವಾಡ್ ಗೆ ಮುಂಬೈ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು

Pinterest LinkedIn Tumblr

teestaಮುಂಬೈ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಆಕೆಯ ಪತಿ ಜಾವೇದ್ ಆನಂದ್ ಗೆ ಮುಂಬೈ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಸಿಬಿಐ ತನಿಖೆಗೆ ಸಹಕರಿಸುವಂತೆ ತೀಸ್ತಾ ಸೆಟಲ್ವಾಡ್ ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪದ ತನಿಖೆ ನಡೆಸುತ್ತಿದ್ದ ಸಿಬಿಐ, ಸೆಟಲ್ವಾಡ್ ರಾಷ್ಟ್ರೀಯ ಭದ್ರತೆಗೆ ಅಪಾಯ, ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬಾರದೆಂದು ಕೋರ್ಟ್ ಗೆ ಅಭಿಪ್ರಾಯ ತಿಳಿಸಿತ್ತು. ಇದಾದ ಒಂದು ತಿಂಗಳ ಬಳಿಕ ಮುಂಬೈ ಕೋರ್ಟ್ ತೀಸ್ತಾ ಸೆಟಲ್ವಾಡ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಿಬಿಐ ಅಭಿಪ್ರಾಯವನ್ನು ತಳ್ಳಿಹಾಕಿರುವ ಮುಂಬೈ ಕೋರ್ಟ್, ತೀಸ್ತಾ ಸೆಟಲ್ವಾಡ್ ರಾಷ್ಟ್ರೀಯ ಭದ್ರತೆಗೆ ಅಪಾಯವೆಂಬಂತೆ ತೋರುವುದಿಲ್ಲ ಎಂದು ಹೇಳಿದೆ. 2004 -2008 ರ ನಡುವೆ ಫೋರ್ಡ್ ಫೌಂಡೇಷನ್ ನಿಂದ ದೇಣಿಗೆ ಸ್ವೀಕರಿಸಿದ್ದ ಜಾವೇದ್ ಆನಂದ್ ಹಾಗೂ ತೀಸ್ತಾ ಸೆಟಲ್ವಾಡ್ ವಿರುದ್ಧ ಎಫ್.ಸಿ.ಆರ್ ಎ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

Write A Comment