ಮುಂಬೈ

ಗೇಟ್‌ ವೇ ಆಫ್‌ ಇಂಡಿಯಾ ಬಳಿ ನೀರಿನಲ್ಲಿ ತೇಲಿ ಬಂತು 1000 ರೂ. ನೋಟುಗಳು !

Pinterest LinkedIn Tumblr

note

ಮುಂಬಯಿ: ದುಡ್ಡು ಆಕಾಶದಿಂದ ಉದುರಿದರೆ ಅಥವಾ ನೀರಿನಲ್ಲಿ ತೇಲಿ ಬಂದರೆ ಎಂದು ಕನಸು ಕಾಣುತ್ತಿದ್ದವರಿಗೆ ಅಂದು ಅಚ್ಚರಿ ಕಾದಿತ್ತು. ಮುಂಬಯಿನ ಗೇಟ್‌ ವೇ ಆಫ್‌ ಇಂಡಿಯಾ ಬಳಿ ಮಂಗಳವಾರ ಇಂಥ ಹೈಡ್ರಾಮ ನಡೆಯಿತು. ನೀರಿನಲ್ಲಿ ತೇಲಿ ಬಂದ 1000 ರೂ. ಮುಖಬೆಲೆಯ ನೋಟುಗಳು ಸ್ಥಳೀಯರ ಕಣ್ಣರಳಿಸಿತು.

‘ಗೇಟ್‌ ವೇ ಬಳಿ ನೀರಿನಲ್ಲಿ ನೋಟುಗಳು ಹರಿದು ಬರುತ್ತಿವೆ ಎಂಬ ವಿಷಯ ತಿಳಿಯಿತು. ಕೂಡಲೇ ಅಲ್ಲಿಗೆ ಓಡಿದೆ. ಸಮುದ್ರದ ತಡೆಗೋಡೆ ಬಳಿ ಹಲವು ನೋಟುಗಳು ಕಣ್ಣಿಗೆ ಬಿದ್ದವು. ತಕ್ಷಣ ಗೋಡೆ ಹಾರಿ, 1000 ರೂ. ಮುಖಬೆಲೆ 5 ನೋಟು ಸಂಗ್ರಹಿಸಿದೆ. ಆ ವೇಳೆಗೆ ಅಲೆಗಳ ಅಬ್ಬರ ಹೆಚ್ಚಾಯಿತು ಕೂಡಲೇ ಮೇಲೆದ್ದು ಬಂದೆ,’ ಎಂದು ಕೊಲಾಬಾ ನಿವಾಸಿ ಹರಿಚಂದ್ರ ಸೋಮರ್‌ ತಿಳಿಸಿದ್ದಾರೆ.

ಮತ್ತೊಬ್ಬ ನಿವಾಸಿ ಎಸ್‌ ವಕಿಲ್‌ಗೆ ಸಿಕ್ಕಿದ್ದು ಕೇವಲ ಒಂದೇ ನೋಟು. ಪೊಲೀಸರ ಕೈಗೆ ಸಿಕ್ಕಿ ಬೀಳುವ ಮೊದಲು ಸಂತೋಷ್‌ ಪವಾರ್‌ಗೆ ದೊರೆತದ್ದು ಕೇವಲ ಒಂದು ನೋಟು.

ಪವಾರ್‌ ಪ್ರಕಾರ , ವಿದೇಶಿ ವ್ಯಕ್ತಿ ಆ ಹಣವನ್ನು ನೀರಿಗೆ ಎಸದಿದ್ದ. ‘ವಿದೇಶಿ ವ್ಯಕ್ತಿಯೊಬ್ಬ ಉದಾರ ಮನಸಿನಿಂದ ಹಣವನ್ನು ನೀರಿಗೆ ಎಸೆದಿದ್ದಾನೆ ಎಂಬ ವಿಷಯ ನನ್ನ ಕಿವಿ ಮುಟ್ಟಿತು. ನಾನು ಆ ಸ್ಥಳ ತಲುಪುವ ಮೊದಲೇ ಹಲವಾರು ಮಂದಿ ನೀರಿಗೆ ಇಳಿದಿದ್ದರು. ನನ್ನ ಅದೃಷ್ಟಕ್ಕೆ ದಕ್ಕಿದ್ದು ಒಂದೇ ನೋಟು,’ ಎಂದಿದ್ದಾರೆ.

‘1000 ರೂ. ಮುಖಬೆಲೆಯ ನೋಟು ಸಂಗ್ರಹಿಸಿದ್ದ ಮೂವರನ್ನು ಬಂಧಿಸಿ, ಅವರ ಹೇಳಿಕೆ ಪಡೆದು ನಂತರ ಬಿಡುಗಡೆ ಮಾಡಿದೆವು,’ ಎಂದು ಕೊಲಾಬಾ ಪೊಲೀಸರು ತಿಳಿಸಿದ್ದಾರೆ.

Write A Comment