ದೇವಾಡಿಗ ಸಂಘ ಮುಂಬೈ ಮಹಿಳಾ ವಿಭಾಗದ ವತಿಯಿಂದ “ಆಟಿಡ್ ಒಂಜಿ ದಿನ ಆಚರಣೆಯು ಜುಲೈ .ರಂದು ದೇವಾಡಿಗ ಸೆಂಟರ್ ದಾದರ್ ನಲ್ಲಿ ಬಹಳ ವಿಜ್ರಂಭಣೆಯೊಂದಿಗೆ ಜರಗಿತು.. ಮಹಿಳಾ ವಿಭಾಗದ ಕಾರ್ಯದಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.
ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗರು ಮಹಿಳಾ ವಿಭಾಗದವರು ಮಾಡುವ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದಲ್ಲದೆ ಆಟಿ ತಿಂಗಳಲ್ಲಿ ತಯಾರಿಸುವ ತುಳು ನಾಡಿನ ಎಲ್ಲ ತರದ ತಿಂಡಿ ತಿನಸುಗಳನ್ನು ರುಚಿಸಲು ಅವಕಾಶ ಮಾಡಿಕೊಟ್ಟಂತಹ ಮಹಿಳೆಯರಿಗೆ ಅಭಿನಂದಿಸಿದರು. ಸಂಘದ ಗೌ. ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಜೆ ಮೊಯಿಲಿ ಯವರು ಆಟಿಯಲ್ಲಿ ನಾವು ಮಾಡುವ ಆಚಾರ ವಿಚಾರಗಳ ಬಗ್ಗೆ ಮಾತನಾಡಿದರು.
ಶ್ರೀ ಜಯ ಎಲ್ ದೇವಾಡಿಗ, ಶ್ರೀ ಪ್ರಭಾಕರ್ ದೇವಾಡಿಗ ಇವರು ಕೂಡ ಊರಿನ ಸಂಸ್ಕಾರ ಸಂಸ್ಕೃತಿಯ ಬಗ್ಗೆ ತಮ್ಮ ಮಾತಿನ ವೈಖರಿಯಲ್ಲಿ ತಿಳಿಸಿದರು.
ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಜಯಂತಿ ಮಾಧವ ದೇವಾಡಿಗರು ಆಟಿಯಲ್ಲಿ ತಿನ್ನುವ ಖಾಧ್ಯ ಪದಾರ್ಥಗಳ ವಿಶೇಷತೆಯನ್ನು ತಿಳಿಸುತ್ತಾ ಹಿಂದಿನ ಜನರು ಬಡತನದಲ್ಲಿದ್ದು ಯಾವ ಪದಾರ್ಥವನ್ನು ತಿಂದು ಬಲವಂತರಾಗಿದ್ದರು ಎಂಬುದನ್ನು ತಿಳಿಸುತ್ತಾ ಮುಂದಿನ ಜನಾಂಗಗಳಿಗೆ ಈ ತಿನಸುಗಳು ಎಷ್ಟು ಅವಶ್ಯಕತೆ ಇದೆ ಎಂಬ ವಿಚಾರ ತಿಳಿಸಿದರು. ಶ್ರೀಮತಿ ಪ್ರಪುಲ್ಲ ವಾಸು ದೇವಾಡಿಗರು ತುಳುನಾಡಿಗೆ ಸಂಬಂದಪಟ್ಟ ಪ್ರಶ್ನೋತ್ತರಗಳ ಸ್ಪರ್ದೆ ಮೂಲಕ ಮನರಂಜಿಸಿದರು.
ಶ್ರೀಮತಿ ರಂಜಿನಿ ಆರ್ ಮೊಯ್ಲಿ ತನ್ನ ತಂಡದೊಂದಿಗೆ ಆತಿಬಗ್ಗೆ ರಚಿಸಿದ ಹಾಡು ಹಾಡಿದರು. ಕಾರ್ಯಾರಮದಲ್ಲಿ ಭಾಗವಾಹಿದವರೆಲ್ಲರೂ ಸಾಂಪ್ರದಾಯಿಕ ಭಕ್ಷ್ಯಗಳು ತಂದರು. ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಬಹುಮಾನವಿತ್ತು ಪ್ರೋತ್ಸಾಹಿಸಲಾಯಿತು. ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ವಿಶೇಷ ಬಹುಮಾನ ನೀಡಲಾಯಿತು. ಅತ್ಯಧಿಕವಾಗಿ ಭಾಗವಹಿಸುವಿಕೆ ಬಹುಮಾನವನ್ನು ಸಿಟಿ ಪ್ರಾದೇಶಿಕ ಸಮನ್ವಯ ಸಮಿತಿಗೆ ನೀಡಲಾಯಿತು.. ಬಹುಮಾನ ಶ್ರೀಮತಿ ಭಾರತಿ ನಿಟ್ಟೇಕರ್ ಪ್ರಾಯೋಜಿಸಿದರು.
ಶ್ರೀಮತಿ ಪ್ರಫುಲ್ಲ ವಿ ದೇವಾಡಿಗ ಪ್ರಾಯೋಜಿಸಿದ ಇತರ ವಿಶೇಷ ಬಹುಮಾನಗಳನ್ನು 1.) ದಿನದ ಲಖಿ ಲೇಡಿ ಶ್ರೀಮತಿ ರಮಣಿ ದೇವಾಡಿಗ 2.) ರಸಪ್ರಶ್ನೆ ಸ್ಪರ್ಧೆ: 1 ನೇ ಪ್ರಶಸ್ತಿ ವಿಜೇತೆ ಶ್ರೀಮತಿ ಪ್ರಭಾ ದೇವಾಡಿಗ ಮತ್ತು 2 ನೇ ಬಹುಮಾನ ಶ್ರೀಮತಿ ಅಮಿತಾ ರಾವ್ ಅತ್ಯಂತ ಸೊಗಸಾದ ಮಹಿಳೆ ಶುಭಾ ದೇವಾಡಿಗ, 3.) ಶುಭಾ ದೇವಾಡಿಗ ಸುರ್ಪೃಿಜ಼ೆ ಉಡುಗೊರೆಯಾಗಿ ಗೆದ್ದುಕೊಂಡರು
ಮಹಿಳೆ ತನ್ನ ಕುಟುಂಬದಲ್ಲಿ ಅನೇಕ ಪಾತ್ರ ವಹಿಸುತ್ತಾಳೆ ಆದ್ದರಿಂದ, ಈ ಸಂದರ್ಭದಲ್ಲಿ ಒಂದು ಕ್ರಿಯಾತ್ಮಕ ವ್ಯಕ್ತಿತ್ವ ಮಹಾರಾಷ್ಟ್ರ ಸರ್ಕಾರದ ಪ್ರಕಾಶ್ ಕದಂ ಪ್ರಶಸ್ತಿ ವಿಜೇತ. ಶ್ರೀ ವಿಷ್ಣು ಬಾಳಾ ಧುರಿ ಇವರನ್ನು ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಉಪನ್ಯಾಸ ನೀಡಲು ಆಹ್ವಾನಿಸಲಾಯಿತು. ಅವರ ಈ ಕಾರ್ಯಕ್ರಮವು ಪ್ರತಿದಿನ 9.30 ಕ್ಕೆ ಸಯಾದ್ರಿ ಚಾನೆಲ್ ಪ್ರಸಾರವಾಗುತ್ತದೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸಲಹೆಯೊಂದಿಗೆ ಹಲೋ ಸಖಿ ಕಾರ್ಯಕ್ರಮ ಒಳಗೊಂಡಿತ್ತು.ಈ ವಿಷಯದ ಮಹತ್ವವನ್ನಿ ಚಿತ್ರ ಪ್ರದರ್ಶನದ ಮೂಲಕ ಪ್ರಕೃತಿಯ ಸೌಂದರ್ಯ ಪ್ರದರ್ಶನ ವೀಕ್ಷಿಸಲಾಯಿತು .
ಮಹಿಳಾ ವಿಭಾಗದ ಸಲಹಾಗಾರ್ತಿ ಶ್ರೀಮತಿ ಶಶಿಕಲಾ ಎಸ್ ಮೊಯಿಲಿ, ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಮೊಯಿಲಿ, ಮತ್ತು ಉಪಾಕಾರ್ಯದಕ್ಷೆ ಶ್ರೀಮತಿ ಸುರೇಖಾ ದೇವಾಡಿಗರು ಕಾರ್ಯಕ್ರಮವು ಸಫಲವಾಗಲು ಸಹಕರಿಸಿದರು.
ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಹಿರಿಯಡ್ಕ ಮೋಹನ್ದಾಸ್, ಉಪಾಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ, ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲ್ ಎಂ ಮೊಯಿಲಿ, ಗೌ. ಪ್ರದಾನ ಕಾರ್ಯದರ್ಶಿ ಶ್ರೀ ಪದ್ಮನಾಭ ದೇವಾಡಿಗ, ಶ್ರೀ ಆನಂದ ದೇವಾಡಿಗ ಶ್ರೀಮತಿ ಅಮಿತಾ ರಾವು, ಶ್ರೀಮತಿ ಜಲಜ ಏ ದೇವಾಡಿಗ, ಡಾ. ರೇಖಾ, ಶ್ರೀ ಶ್ರೀಧರ ದೇವಾಡಿಗ ಹಾಗೂ ಇನ್ನಿತರ ಗಣ್ಯರು ಉಪಸ್ತಿತರಿದ್ದರು.
ಸಂಘದ ಮಹಿಳಾ ವಿಭಾಗದ ಸದಸ್ಯರು ಹಾಗೂ ಹತ್ತು ಪ್ರಾದೇಶಿಕ ಸಮನ್ವಯ ಸಮಿತಿಯ ಮಹಿಳಾ ಸದಸ್ಯರು ಸುಮಾರು 60 ತರದ ವಿವಿಧ ಆಟಿ ತಿಂಗಳಲ್ಲಿ ತಯಾರಿಸುವ ತಿಂಡಿ ತಿನಸುಗಲ್ಲನ್ನು ತಯಾರಿಸಿ ತಂದಿರುವರು. ಇವರೆಲ್ಲರ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಸಫಲವಾಗಿ ಜರಗಿತು. ಆಗಮಿಸಿದ ಎಲ್ಲ ಬಂದು ಬಾಂಧವರು ಖಾದ್ಯಗಳ ಸವಿ ಯುಂಡರು. ಕಾರ್ಯಕ್ರಮ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಜಯಂತಿ ಎಂ ದೇವಾಡಿಗ ನಿರೂಪಿಸಿದರು.