ಮುಂಬೈ

ಅಮೃತನಗರ ಪಾರ್ಕಸೈಟ್, ತುಳು ಕನ್ನಡಾಭಿಮಾನಿ ಬಳಗದ ವಾರ್ಷಿಕೋತ್ಸವ; ಮಕ್ಕಳಿಗೆ ಸಂಸ್ಕಾರ ತಾಯಿಯ ಮಡಿಲಲ್ಲಿ ಸಿಗುವಂತಾಗಬೇಕು: ಆಡ್ವಕೇಟ್ ಸುಭಾಷ್ ಬಿ. ಶೆಟ್ಟಿ

Pinterest LinkedIn Tumblr

DSC_0002

ಮುಂಬಯಿ : ವಿಕ್ರೋಲಿ ಮತ್ತು ಘಾಟ್ಕೋಪರ್ ಪರಿಸರದ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಅಮೃತನಗರ ಪಾರ್ಕಸೈಟ್, ತುಳು ಕನ್ನಡಾಭಿಮಾನಿ ಬಳಗದ ಐದನೇ ವಾರ್ಷಿಕೋತ್ಸವ ಸಮಾರಂಭವು ಅ. 26 ರಂದು ಪಾರ್ಕಸೈಟ್, ವಿಕ್ರೋಲಿ ಪಶ್ಚಿಮದ ಛತ್ರಪತಿ ಶಿವಾಜಿ ಮೈದಾನ (ಸಭಾಗೃಹ) ಲ್ಲಿ ಜರಗಿತು.

DSC_0012

DSC_0020

DSC_0025

ಅಮೃತನಗರ ಪಾರ್ಕಸೈಟ್, ತುಳು ಕನ್ನಡಾಭಿಮಾನಿ ಬಳಗದ ಅಧ್ಯಕ್ಷರಾದ ಆಡ್ವಕೇಟ್ ಸುಭಾಷ್ ಬಿ. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಬಳಗದ ಸಕ್ರಿಯ ಕಾರ್ಯಕರ್ತರಾದ ಸಮಾಜಸೇವಕ, ಹೋಟೇಲು ಉದ್ಯಮಿ ನಾರಾಯಣ ಸಿ. ಶೆಟ್ಟಿ ದಂಪತಿ ಮತ್ತು ವಾಹತುಕ್ ಸೇನಾದ ವಿಭಾಗ ಸಂಘಟಕರಾದ ಸಂಜಯ್ ಬಾಬು ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಆಡ್ವಕೇಟ್ ಸುಭಾಷ್ ಬಿ. ಶೆಟ್ಟಿ ಯವರು ಮಾತನಾಡುತ್ತಾ, ಈ ಪರಿಸರದಲ್ಲಿ ನಿಷ್ಥಾವಂತ ಸಮಾಜ ಸೇವಕರು ಒಳಗೊಂಡಿದ್ದಾರೆ. ಐದು ವರ್ಷಗಳ ಹಿಂದೆ ತುಳು ಕನ್ನಡಿಗರನ್ನು ಈ ಪರಿಸರದಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಬಳಗದ ಕಾರ್ಯಕರ್ತರು ಈ ಸಂಘಟನೆಯ ಮೂಲಕ ಕನ್ನಡ-ತುಳು ಬಾಷೆ ಹಾಗೂ ಸಂಸ್ಕ್ರುತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಮಾತೃಬಾಷೆಯಲ್ಲಿ ನಮ್ಮ ಸಂಸ್ಕೃತಿ ಒಳಗೊಂಡಿದೆ. ಇಂಗ್ಲೀಷ್ ಬಾಷೆಯ ಒಲವು ಅಗತ್ಯ ಆದರೆ ಅದು ನಮ್ಮ ಸಂಸ್ಕಾರ ಅರಿಯುವ ಬಾಷೆಯಾಗಿರದೆ ಸಂಸ್ಕಾರಯುತರಾಗಿ ಬಾಳಲು ಮಕ್ಕಳಿಗೆ ತಾಯಿಯ ಮಡಿಲೇ ಪೂರಕ ಶಕ್ತಿಯಾಗಬೇಕು. ನಮ್ಮ ನಾಡಿನ ಕಲೆಯಾದ ಯಕ್ಷಗಾನವನ್ನು ಉಳಿಸಿಕೊಂಡು ಯುವ ಪೀಳಿಗೆಗೆ ನಮ್ಮ ಶ್ರೀಮಂತ ಕಲೆಯ ಬಗ್ಗೆ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದ ಮನಿ ಪೋಲ್ಡ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷರಾದ ಕಡಂದಲೆ ಸುರೇಶ್ ಭಂಡಾರಿಯವರು ಮಾತನಾಡುತ್ತಾ ಈ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಯಾವುದೇ ಹೃದಯ ಸಮಂಧಗಳಿಲ್ಲದೆ ತುಳು -ಕನ್ನಡವನ್ನು ಒಗ್ಗೂಡಿಸುವ ಕಾರ್ಯವನು ಸಂಘ ಸಂಸ್ಥೆಗಳು ನಡೆಸುತ್ತದೆ. ಯಕ್ಷಗಾನದ ಅಭಿಮಾನವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಒಳಿತಿನ ಕೆಲಸ ಮಾಡುತ್ತದೆ. ನಾವು ಬದುಕುದರೊಂದಿಗೆ ಇನ್ನೊಬ್ಬರಿಗೆ ಆಶ್ರಯವಾಗಬೇಕು ಎಂದರು.

ಇನ್ನೋರ್ವ ಅತಿಥಿ ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಾಡಿನ ಕಲೆಯಾದ ಯಕ್ಷಗಾನದ ಮೂಲಕ ಊರಿನ ಜನರನ್ನು ಒಗ್ಗೂಸುವ ಕೆಲಸ ಮಾಡುತ್ತಿರ ಈ ಸಂಸ್ಥೆಯ ಕಾರ್ಯ ಸ್ಲಾಗನೀಯ. ಪುಣ್ಯದ ಕೆಲಸ ಮಾಡುದರೊಂದಿಗೆ ನಮ್ಮ ಬದುಕು ಪಾವನಗೊಳ್ಳುತ್ತದೆ ಎಂದರು.

ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸರಳಾ ಬಿ. ಶೆಟ್ಟಿಯವರು ಶೆಟ್ಟಿಯವರು ಅತಿಥಿ ಸ್ಥಾನದಿಂದ ಮಾತನಾಡುತ್ತಾ ಈ ಸಂಸ್ಥೆ ಈ ಪರಿಸರದ ತುಳು ಕನ್ನಡಿಗರನ್ನು ಓಗ್ಗೂಡಿಸುತ್ತಿದ್ದು ಈ ಪರಿಸರದ ತುಳು ಕನ್ನಡಿಗರು ಶ್ರೀಮಂತ ಮನಸ್ಸಿನವರು. ಈ ಸಂಸ್ಥೆ ಮುಂದಕ್ಕೆ ಬೆಳೆಯುವಲ್ಲಿ ನನ್ನ ವ್ಯಯಕ್ತಿಯ ಸಹಕಾರವಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಶಿಕ್ಷಕಿ ಅಮೃತ ಶೆಟ್ಟಿಯವರು ನಿರೂಪಿಸಿದರು. ಉಪಾಧ್ಯಕ್ಷ ರಾಜು ಪಿ. ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಗೌರವ ಅಧ್ಯಕ್ಷ ವಿಜಯ ಡಿ. ಶೆಟ್ಟಿ, ಗೌರವ ಕಾರ್ಯದರ್ಶಿ ಶಿವಾ ಪುತ್ರನ್, ಗೌರವ ಕೋಶಾಧಿಕಾರಿ ನಾರಾಯಣ ಸಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಜೆಕಾರು ಕಲಾಭಿಮಾನಿ ಬಳಗದ ಕಲಾವಿದರಿಂದ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಶಗಾಅನ ಪ್ರದರ್ಶನ ನಡೆಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

Write A Comment