ಮನೋರಂಜನೆ

ಹಿಟ್ ಅಂಡ್ ರನ್ ಪ್ರಕರಣ: ನಟ ಸಲ್ಮಾನ್ ಖಾನ್ ಖುಲಾಸೆ; ಶಂಕೆಯ ಮೇರೆಗೆ ಶಿಕ್ಷಿಸಲು ಸಾಧ್ಯವಿಲ್ಲ: ಬಾಂಬೆ ಹೈ ಕೋರ್ಟ್

Pinterest LinkedIn Tumblr

Salman-Khan2

ಮುಂಬೈ: ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಭೀತಿ ಎದುರಿಸುತ್ತಿದ್ದ ನಟ ಸಲ್ಮಾನ್ ಖಾನ್ ಅವರನ್ನು ಬಾಂಬೇ ಹೈಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಬಳಿಕ ಖಾನ್ ಜಾಮೀನಿನ ಮೇಲೆ ಹೊರಬಂದಿದ್ದರು.

ಕೆಳಹಂತದ ನ್ಯಾಯಾಲಯದ(ಮುಂಬೈ ಸೆಷನ್ ಕೋರ್ಟ್) ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯ ತೀರ್ಪನ್ನು ಬರೆಸುವ ಪ್ರಕ್ರಿಯೆ ವೇಳೆ ನ್ಯಾ.ಎ.ಆರ್.ಜೋಷಿ ಅವರು, ಖಾನ್ ಮಾಜಿ ಅಂಗರಕ್ಷಕ ರವೀಂದ್ರ ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಖಾನ್ ಖುಲಾಸೆಗೊಳ್ಳುವ ಸುಳಿವನ್ನು ನೀಡಿದ್ದರು.

ತನಿಖೆ ಸರಿಯಾಗಿ ನಡೆದಿಲ್ಲ:ಬಾಂಬೆ ಹೈಕೋರ್ಟ್
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ಸರಿಯಾಗಿ ನಡೆದಿಲ್ಲ. ಅಲ್ಲದೇ ಪ್ರಾಷಿಕ್ಯೂಷನ್ ಕೊಟ್ಟ ಸಾಕ್ಷ್ಯಾಧಾರ ಸಾಕಾಗಲ್ಲ. ಹಾಗಾಗಿ ಸಲ್ಮಾನ್ ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಜಡ್ಜ್ ನ್ಯಾ.ಜೋಷಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಯಾವುದೇ ಸೆಕ್ಷನ್ ಅಡಿಯಲ್ಲಿ ಶಿಕ್ಷೆ ನೀಡಲಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಹಿಟ್ ಅಂಡ್ ರನ್ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸುವ ವೇಳೆ, ಸಲ್ಮಾನ್ ಖಾನ್ ಎಲ್ಲಿದ್ದರೂ ನ್ಯಾಯಾಲಯಕ್ಕೆ ಬರಲು ಹೇಳಿ, ಅವರು ಇಲ್ಲಿ ಉಪಸ್ಥಿತರಿರಬೇಕು ಎಂದು ಜಡ್ಜ್ ನ್ಯಾ.ಎ.ಆರ್.ಜೋಷಿ ಸಲ್ಮಾನ್ ಪರ ವಕೀಲರಿಗೆ ಸೂಚಿಸಿದ್ದರು. ಆ ನಿಟ್ಟಿನಲ್ಲಿ ಸಲ್ಮಾನ್ ಖಾನ್ 1.30ಕ್ಕೆ ಕೋರ್ಟ್ ಗೆ ಹಾಜರಾಗುತ್ತಾರೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು. ಅದರಂತೆ 1.35ಕ್ಕೆ ಸಲ್ಮಾನ್ ಕೋರ್ಟ್ ಗೆ ಆಗಮಿಸಿದ್ದರು.

Write A Comment