ಮುಂಬೈ

ಜಾಗತಿಕ ಬೆಳವಣಿಗೆ ನಿಧಾನಗತಿಯಲ್ಲಿದ್ದರೂ ಭಾರತದ ಆರ್ಥಿಕ ಬೆಳವಣಿಗೆ ಆಶಾದಾಯಕ : ಹಾರ್ವರ್ಡ್ ಅಧ್ಯಯನ ವರದಿ

Pinterest LinkedIn Tumblr

Harvard-Universityಮುಂಬೈ: ಮುಂಬರುವ ದಶಕಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗುವ ಸಾಮರ್ಥ್ಯ ಭಾರತಕ್ಕಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಯೊಂದು ಹೇಳಿದೆ.

ಚೀನಾದ ಆರ್ಥಿಕತೆ ಕುಗ್ಗುತ್ತಿದ್ದು, 2016 -2017 ರಲ್ಲಿ ಭಾರತದ ಆರ್ಥಿಕತೆ 7 .3 ರಿಂದ 7 .5  ಪ್ರತಿಶತ ಬೆಳವಣಿಗೆಯಾಗಲಿದೆ. ಇದಕ್ಕೆ ಪೂರಕವಾಗಿ ಪ್ರಸಕ್ತ ವರ್ಷದಲ್ಲಿ ಭಾರತದ ಜಿಡಿಪಿ 7 -7 .5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದ್ದು ವಿಶ್ವದಲ್ಲಿ ಅತ್ಯಂತ ಹೆಚ್ಚು ವಾರ್ಷಿಕ ಆರ್ಥಿಕ ಅಭಿವೃದ್ಧಿಯಾಗುವ ದೇಶಗಳ ಪೈಕಿ ಭಾರತ ಮೊದಲನೇ ಸ್ಥಾನದಲ್ಲಿದೆ ಎಂದು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಡೆವಲಪ್ಮೆಂಟ್ (ಸಿಐಡಿ) ಡಾಟಾ ಅಂದಾಜಿಸಿದೆ.

ಪೂರ್ವ ಆಫ್ರಿಕಾ,ಉಗಾಂಡ, ಟಾಂಜಾನಿಯಾ ಮತ್ತು ಕೀನ್ಯಾ ರಾಷ್ಟ್ರಗಳನ್ನು ಆರ್ಥಿಕ ಅಭಿವೃದ್ಧಿಯಾಗುವ ಟಾಪ್ 10 ರಾಷ್ಟ್ರಗಳ ಪೈಕಿ ಗುರುತಿಸಲಾಗಿದ್ದು, ವಾರ್ಷಿಕವಾಗಿ ಕನಿಷ್ಠ 5 .5 ಪ್ರತಿಶತ ಆರ್ಥಿಕ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Write A Comment