ಮುಂಬೈ

ಶೀನಾ ಹತ್ಯೆ ಪ್ರಕರಣ: ಪೀಟರ್ ಮುಖರ್ಜಿ ನ್ಯಾಯಾಂಗ ಬಂಧನ ವಿಸ್ತರಣೆ

Pinterest LinkedIn Tumblr

peterಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಟಿವಿ ವಾಹಿನಿಯ ಮಾಜಿ ಮುಖ್ಯಸ್ಥ ಪೀಟರ್ ಮುಖರ್ಜಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜನವರಿ 11ರವರೆಗೆ ವಿಸ್ತರಿಸಲಾಗಿದೆ.

ಪೀಟರ್ ಮುಖರ್ಜಿಯ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಯ ಪರ ವಕೀಲ ಕುಶಾಲ್ ಮೊರ್ ಅವರು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ವಿಚಾರಣೆಗೆ ಹಾಜರಾದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ವಿ. ಅದೊನೆ ಅವರು, ಮುಖರ್ಜಿ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ಮುಂದೂಡಿದರು.

ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಪೀಟ್ ಮುಖರ್ಜಿಯನ್ನು ಕೋರ್ಟ್‌ಗೆ ಕರೆತರಲು ಸಾಧ್ಯವಾಗಲಿಲ್ಲ ಎಂದು ಸಿಬಿಐ ಪರ ವಕೀಲೆ ಕವಿತಾ ಪಾಟೀಲ್ ಅವರು ಕೋರ್ಟ್ ತಿಳಿಸಿದರು. ಅಲ್ಲದೆ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಆರೋಪಿಯ ನ್ಯಾಯಂಗ ಬಂಧನ ಅವಧಿಯನ್ನು ವಿಸ್ತರಿಸುವಂತೆ ಕೋರ್ಟ್‌ಗೆ ಮನವಿ ಮಾಡಿದರು.

ಶೀನಾ ಬೋರಾ ಕೊಲೆ ಪ್ರಕರಣ ಸಂಬಂಧ 59 ವರ್ಷದ ಪೀಟರ್ ಮುಖರ್ಜಿಯನ್ನು ನವೆಂಬರ್ 19ರಂದು ಬಂಧಿಸಲಾಗಿತ್ತು. ಬಳಿಕ ಎರಡು ವಾರಗಳ ಕಾಲ ಆರೋಪಿಯನ್ನು ಸಿಬಿಐ ವಶಕ್ಕೆ ನೀಡಲಾಗಿತ್ತು.

Write A Comment