ಮುಂಬೈ

ನವಾಜ್ ಶರೀಫ್ ಜತೆ ಮೋದಿ ಚಹಾ ಕುಡಿದಿದ್ದಕ್ಕೆ ನಮ್ಮ ಏಳು ಯೋಧರು ಹುತಾತ್ಮರಾದರು! ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ

Pinterest LinkedIn Tumblr

modi-shiv

ಮುಂಬೈ: ಪಠಾಣ್‌ಕೋಟ್ ದಾಳಿ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿ ನವಾಜ್ ಶರೀಫ್ ಜತೆ ಚಹಾ ಕುಡಿದಿದ್ದಕ್ಕೆ, ನಾವು ಏಳು ಯೋಧರನ್ನು ಕಳೆದುಕೊಂಡು ಬೆಲೆ ತೆರಬೇಕಾಗಿ ಬಂತು ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ, ಪಠಾಣ್‌ಕೋಟ್ ದಾಳಿ ನಂತರ ದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸುವಂತೆ ಮನವಿ ಮಾಡಿದೆ. ನವಾಜ್ ಶರೀಫ್ ಅವರೊಂದಿಗೆ ಚಹಾ ಕುಡಿಯುವುದು ಮೋದಿಯವರ ವೈಯಕ್ತಿಕ ನಿರ್ಧಾರವಾಗಿತ್ತು. ಆ ಒಂದು ಚಹಾಕ್ಕಾಗಿ ನಾವು ಏಳು ವೀರ ಯೋಧರನ್ನು ಕಳೆದುಕೊಂಡೆವು. ಈ ಯೋಧರು ಹುತಾತ್ಮರಾಗಿದ್ದು ಯಾಕೆ? ನಮ್ಮ ದೇಶ ಯಾಕೆ ಹೋರಾಟ ಮಾಡುತ್ತಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದು ಶಿವಸೇನೆ ತಮ್ಮ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದೆ.

ಪಠಾಣ್‌ಕೋಟ್ ನಲ್ಲಿ ಉಗ್ರರ ದಾಳಿ ನಡೆದು 72 ಗಂಟೆಗಳಾಗಿಯೂ ಕಾರ್ಯಾಚರಣೆ ನಿಂತಿಲ್ಲ. ನಮ್ಮಲ್ಲಿ ಆಂತರಿಕ ರಕ್ಷಣಾ ವ್ಯವಸ್ಥೆ ಸಡಿಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಶಿವಸೇನೆ ಹೇಳಿದೆ. ಪಾಕಿಸ್ತಾನ ಪಠಾಣ್‌ಕೋಟ್‌ಗೆ ಉಗ್ರರನ್ನು ಕಳುಹಿಸುವ ಮೂಲಕ ವಿಶ್ವಾಸವನ್ನು ಮುರಿದಿದೆ ಎಂದು ಶಿವಸೇನೆ ತಮ್ಮ ಮುಖವಾಣಿಯಲ್ಲಿ ಹೇಳಿದೆ.

Write A Comment