ಮುಂಬೈ

ಪಾತಕಿ ದಾವೂದ್ ಆಸ್ತಿ ಖರೀದಿಸಿ ಹಣ ಕಟ್ಟಲಾಗದೆ ಕೈಚೆಲ್ಲಿದ ಪತ್ರಕರ್ತ

Pinterest LinkedIn Tumblr

dawood

ಮುಂಬೈ, ಜ.8-ತನ್ನ ಶಕ್ತಿ-ಸಾಮರ್ಥ್ಯಗಳನ್ನು ಅರಿತುಕೊಳ್ಳದೆ ಸಾರ್ವಜನಿಕವಾಗಿ ಸ್ಪರ್ಧೆಗಿಳಿದರೆ ಅದರಿಂದ ಅವಮಾನವಾಗುವುದು ಖಂಡಿತ ಎಂಬುದಕ್ಕೆ ಒಳ್ಳೆಯ ಉದಾಹರಣೆ ಮುಂಬೈ ಪತ್ರಕರ್ತ. ಇತ್ತೀಚೆಗೆ ಮುಂಬೈಯಲ್ಲಿ ಭೂಗತಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಕೆಲವು ಸ್ಥಿರ ಮತ್ತು ಚರ ಆಸ್ತಿಗಳನ್ನು ಹರಾಜು ಹಾಕಲಾಯಿತು. ಈ ಸಂದರ್ಭ ಒಂದು ಕಟ್ಟಡವನ್ನು ಇಲ್ಲಿನ ಪತ್ರಕರ್ತರೊಬ್ಬರು ಖರೀದಿಸಿದ್ದರು. ಆದರೆ, ಈಗ ಹರಾಜಿನ ಹಣ ಕಟ್ಟಲಾಗದೆ ಕೈಚೆಲ್ಲಿ ಕುಳಿತಿದ್ದಾರೆ. ನಾನು ಸಾರ್ವಜನಿಕರಿಂದ ಈ ಹಣ ಸಂಗ್ರಹಿಸಬಹುದು. ಜನತೆ ಇಂತಹ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡುತ್ತಾರೆ ಎಂದು ಭಾವಿಸಿದ್ದೆ. ಇದುವರೆಗೆ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ. ಆದರೆ ಹಣ ಸಂಗ್ರಹವಾಗಲಿಲ್ಲ. ಜನತೆ ಸ್ಪಂದಿಸಲಿಲ್ಲ.

ಹಾಗಾಗಿ ಈ ಆಸ್ತಿಯನ್ನು ಕೈಬಿಡಬೇಕಾಗಿ ಬಂದಿದೆ ಎಂದು ನಿವೃತ್ತ ಪತ್ರಕರ್ತ ಎಸ್.ಬಾಲಕೃಷ್ಣನ್ ಅಳಲು ತೋಡಿಕೊಂಡಿದ್ದಾರೆ.

ದಾವೂದ್ ಇಬ್ರಾಹಿಂಗೆ ಸೇರಿದ ಹೊಟೇಲ್ ರೌನಕ್ ಅಫ್ರೋಸ್ ಕಟ್ಟಡವನ್ನು 30 ಲಕ್ಷ ರೂ. ಠೇವಣಿ ಕಟ್ಟಿ ಬಾಲಕೃಷ್ಣ ಹರಾಜಿನಲ್ಲಿ ತಮ್ಮದಾಗಿಸಿಕೊಂಡಿದ್ದರು. ಆದರೆ ಈಗ ಅವರ ಆಲೋಚನೆ ತಲೆಕೆಳಗಾಗಿದೆ.
ನನ್ನ ಬಳಿ ಇರುವ ಹಣ ಸಾಕಾಗುತ್ತಿಲ್ಲ. ಸಾರ್ವಜನಿಕರೂ ನೆರವು ನೀಡಲಿಲ್ಲ. ಹಾಗಾಗಿ ಈಗ ಇದನ್ನು ಕೈಬಿಡುವುದು ಅನಿವಾರ್ಯವಾಗಿದೆ ಎಂದು 2015ರ ಡಿಸೆಂಬರ್‌ನಲ್ಲಿ ತನ್ನ ದೇಶ್ ಸೇವಾ ಸಮಿತಿ ಸಂಘಟನೆಯ ಪರವಾಗಿ ಆಸ್ತಿ ಖರೀದಿಸಿದ್ದ ಬಾಲಕೃಷ್ಣನ್ ತಿಳಿಸಿದ್ದಾರೆ. ಇಲ್ಲಿನ ಭೆಂದಿ ಬಜಾರ್‌ನ ಪಕ್ಮೋದಿಯಾ ಬೀದಿಯಲ್ಲಿರುವ ಹೊಟೇಲ್ ರೌನಕ್ ಅಫ್ರೋಸ್ ಕಟ್ಟಡವನ್ನು 4.28 ಕೋಟಿಗೆ ಖರೀದಿಸಿದ್ದರು.

Write A Comment