ಮುಂಬೈ

ಏಷ್ಯಾ ಮಾರುಕಟ್ಟೆ ತಲ್ಲಣ : ಕಳೆದ 19 ತಿಂಗಳಲ್ಲೇ ಸೆನ್ಸೆಕ್ಸ್ ಭಾರೀ ಕುಸಿತ

Pinterest LinkedIn Tumblr
179575523
ಮುಂಬೈ: ಕಳೆದ ಒಂದೂವರೆ ವರ್ಷಗಳಲ್ಲಿ ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಅತ್ಯಂತ ಕಡಿಮೆ 335 ಅಂಕ ಕುಸಿತ ಕಂಡುಬಂದಿದ್ದು, ಸೋಮವಾರದ ಬೆಳಗಿನ ವಹಿವಾಟು ಆರಂಭಕ್ಕೆ 24 ಸಾವಿರದ 599ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ ಸಹ 7 ಸಾವಿರದ 500 ಅಂಕಗಳಿಗಿಂತ ಕಡಿಮೆ ಬಂದಿದೆ.
ಚೀನಾ ಮಾರುಕಟ್ಟೆ ಕುಸಿತದ ಭಯ, ಏಷ್ಯಾ ಮಾರುಕಟ್ಟೆಯ ಅಸ್ಥಿರತೆ ಹಾಗೂ ಹಣಕಾಸು ಹೂಡಿಕೆಗಳ ಭಾರೀ ಮಾರಾಟ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಪ್ರಮುಖ ಲೋಹ, ವಾಣಿಜ್ಯ ಗೂಡ್ಸ್ ಮತ್ತು ಸಾರ್ವಜನಿಕ ವಲಯ ಘಟಕಗಳ ಷೇರುಗಳು ಕುಸಿದಿವೆ.
ಮೊನ್ನೆ ಶುಕ್ರವಾರ ವಹಿವಾಟು ಮುಕ್ತಾಯಕ್ಕೆ ಸೆನ್ಸೆಕ್ಸ್ 82 ಅಂಕಗಳಷ್ಟು ಏರಿಕೆ ಕಂಡುಬಂದಿತ್ತು. ನಿಫ್ಟಿ 7 ಸಾವಿರದ 500 ಅಂಕಗಳವರೆಗೆ ತಲುಪಿತ್ತು.
ಚೀನಾ ದೇಶದ ಆರ್ಥಿಕ ಚಟುವಟಿಕೆ ಕುಸಿತ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಕುಸಿತಕ್ಕೆ ಕಾರಣವಾಗಿದೆ. ಏಷ್ಯಾ ವಲಯದಲ್ಲಿ ಹಾಂಕಾಂಗ್ ನ ಹಾಂಗ್ ಸೆಲ್ ಶೇಕಡಾ 2.61 ಅಂಕಗಳಷ್ಟು ಕುಸಿತ ಕಂಡುಬಂದರೆ ಶಾಂಘೈ ಶೇಕಡಾ 2.40ರಷ್ಟು ಕುಸಿತ ಕಂಡಿದೆ. ಇಂದು ಜಪಾನ್ ಷೇರು ಮಾರುಕಟ್ಟೆ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ. ಅಮೆರಿಕದ ಡೋವ್ ಜೋನ್ಸ್ ಕೈಗಾರಿಕಾ ವಲಯ ಶೇಕಡಾ 1.02ರಷ್ಟು ಕುಸಿತ ಕಂಡುಬಂದಿದೆ.

 

 

Write A Comment