ಮುಂಬೈ

ರಾಜ್ ಠಾಕ್ರೆಯ ಪ್ರಚೋದನಕಾರಿ ಭಾಷಣದ ನಂತರ ಆಟೋಗೆ ಬೆಂಕಿ!

Pinterest LinkedIn Tumblr

auto-burn

ಮುಂಬೈ: ಮುಂಬೈಗೆ ವಲಸೆ ಬಂದು ಆಟೋ ಚಲಾಯಿಸುತ್ತಿರುವ ವ್ಯಕ್ತಿಗಳ ಆಟೋಗೆ ಬೆಂಕಿ ಹಚ್ಚಿ ಎಂದು ಮಹರಾಷ್ಟ್ರ ನವ ನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ ಪ್ರಚೋದನಕಾರಿ ಭಾಷಣ ಮಾಡಿದ ನಂತರ ಗುರುವಾರ ಸಂಜೆ ಅಂಧೇರಿಯಲ್ಲಿ ಆಟೋವೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ಆಗಂತುಕರು ಆಟೋವೊಂದಕ್ಕೆ ಬೆಂಕಿ ಹಚ್ಚಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಮುಂಬೈನಲ್ಲಿ ಶೇ. 70ರಷ್ಟು ವಲಸೆ ಬಂದವರು ಆಟೋ ಚಲಾಯಿಸುತ್ತಿದ್ದಾರೆ. ಮುಂಬೈ ರಸ್ತೆಗಳಿರುವುದು ಮುಂಬೈಯವರಿಗೆ ಮಾತ್ರ, ಹೊರಗಿನಿಂದ ಬಂದವರಿಗೆ ಅಲ್ಲ. ಹಾಗಂತ ವಲಸೆ ಬಂದವರು ಹೊಸ ಪರವಾನಗಿ ಪಡೆದು ಮುಂಬೈನಲ್ಲಿ ಆಟೋ ಚಲಾಯಿಸಿದರೆ ಚಾಲಕನನ್ನು ಹೊರಗೆ ಕರೆದು ಆಮೇಲೆ ಆಟೋಗೆ ಬೆಂಕಿ ಹಚ್ಚಿ ಎಂದು ಠಾಕ್ರೆ ಭಾಷಣವೊಂದರಲ್ಲಿ ಹೇಳಿದ್ದರು.

Write A Comment