ಮುಂಬೈ

3 ತಿಂಗಳ ಗರಿಷ್ಠ ಮಟ್ಟಕ್ಕೆ ರುಪಾಯಿ ಮೌಲ್ಯ; 66.85ಕ್ಕೆ ಏರಿಕೆ; 184 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ಮತ್ತು ನಿಫ್ಟಿ 69 ಅಂಕಗಳ ಏರಿಕೆ

Pinterest LinkedIn Tumblr

sensex1

ಮುಂಬೈ: ಸತತ ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ರುಪಾಯಿ ಮೌಲ್ಯ ಗುರುವಾರ ಚೇತರಿಕೆ ಕಂಡಿದ್ದು, 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಈ ಹಿಂದಿನ ವಹಿವಾಟಿನಲ್ಲಿ 67 ರುಪಾಯಿಯ ಆಸುಪಾಸಿನಲ್ಲಿದ್ದ ರುಪಾಯಿ ಮೌಲ್ಯ ಇದೀಗ ಗುರುವಾರ ಒಂದೇ ದಿನ ಶೇ.0.5ರಷ್ಟು ಏರಿಕೆ ಕಾಣುವ ಮೂಲಕ ಡಾಲರ್ ಎದುರು 66.88ಕ್ಕೇ ಏರಿಕೆಯಾಗಿದೆ. ಈ ಹಿಂದಿನ ವಹಿವಾಟಿನಲ್ಲಿ ರುಪಾಯಿ ಮೌಲ್ಯ 67.24ಕ್ಕೆ ಸ್ಥಿರವಾಗಿತ್ತು.

184 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಇನ್ನು ಭಾರತೀಯ ಷೇರುಮಾರುಕಟ್ಟೆ ಕೂಡ ಇಂದು ಅಲ್ಪ ಚೇತರಿಕೆಯಾಗಿದ್ದು, ಸೆನ್ಸೆಕ್ಸ್ 184 ಅಂಕಗಳ ಏರಿಕೆ ಕಂಡಿದೆ. ಬೆಳಗ್ಗೆ 11.45ರ ವೇಳೆಗೆ ಸೆನ್ಸೆಕ್ಸ್ ಶೇ.0.75ರಷ್ಟು ಏರಿಕೆ ಕಂಡು, 24,866.71 ಕ್ಕೆ ಏರಿಕೆಯಾಗಿದೆ. ಇನ್ನು ನಿಫ್ಟಿ ಕೂಡ 69.40 ಅಂಕಗಳ ಏರಿಕೆಯೊಂದಿಗೆ ತನ್ನ ಅಂಕಗಳನ್ನು 7,568.15ಕ್ಕೆ ಹೆಚ್ಚಳ ಮಾಡಿಕೊಂಡಿದೆ. ಪ್ರಮುಖವಾಗಿ ಇಂಧನ ವಲಯಕ್ಕೆ ಹೆಚ್ಚಾಗಿ ಲಾಭ ಕಂಡುಬಂದಿದ್ದು, ಪೆಟ್ರೋಲ್ ಮತ್ತು ಗ್ಯಾಸ್ ಸಂಸ್ಥೆಗಳ ಷೇರುಗಳು ಹೆಚ್ಚಿನ ಲಾಭ ಗಳಿಸಿವೆ.

ಉಳಿದಂತೆ ಔಷಧ ವಲಯಕ್ಕೆ ನಷ್ಟವಾಗಿದ್ದು, 344 ಔಷಧಿಗಳ ಮಾರಾಟದ ಮೇಲೆ ನಿಷೇಧ ಹೇರಿದ ಸರ್ಕಾರದ ಕ್ರಮ ಷೇರುಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

Write A Comment