ಮುಂಬೈ

ಎಸ್ ಬಿ ಐ ನಿಂದ ಮುಂಬಯಿಯಲ್ಲಿರುವ ವಿಜಯಮಲ್ಯ ಕಿಂಗ್ ಫಿಶರ್ ಮನೆ ಹರಾಜು

Pinterest LinkedIn Tumblr

Indian Derby 2011 at the Mahalaxmi Race Course in Mumbai on Sunday.

ಮುಂಬಯಿ: ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ವಿದೇಶಕ್ಕೆ ಹಾರಿರುವ ಮದ್ಯದದೊರೆ ವಿಜಯ್ ಮಲ್ಯ ಅವರ ಮುಂಬಯಿಯ ಅಂಧೇರಿಯಲ್ಲಿರುವ ಕಿಂಗ್ ಫಿಶರ್ ಮನೆ ಹರಾಜು ಹಾಕಲು ಎಸ್ ಬಿಐ ಸಿದ್ಧತೆ ನಡೆಸಿದೆ. ಈ ಮೂಲಕ ಸಾಲ ವಸೂಲು ಮಾಡಲು ಎಸ್ ಬಿಐ ಮುಂದಾಗಿದೆ.

ಬ್ಯಾಂಕ್ ಗಳಿಗೆ ನೀಡಬೇಕಿದ್ದ 1600 ಕೋಟಿ ಸಾಲದ ಹಿನ್ನೆಲೆಯಲ್ಲಿ ಮಲ್ಯ ಮನೆ ಹರಾಜಿಗೆ ಎಸ್ ಬಿ ಐ ನಿರ್ಧರಿಸಿದೆ. 2401 ಚದರ ಅಡಿ ಇರುವ ಈ ಮನೆಯ ಬೆಲೆ 150 ಕೋಟಿ ರು ಆಗಿದೆ. 15 ದಿನಗಳ ಹಿಂದೆಯೇ ಎಸ್ ಬಿಐ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು.

2002ರ ಹಣಕಾಸು ಪುನನಿರ್ಮಾಣ ಕಾಯಿದೆ ಪ್ರಕಾರ ಇ- ಹರಾಜಿಗೆ ಎಸ್ ಬಿ ಐ ಮುಂದಾಗಿದೆ. ಬ್ಯಾಂಕ್ ಗಳಿಂದ ಸಾಲ ಪಡೆದು ವಾಪಸ್ ನೀಡದಿದ್ದಕ್ಕೆ ಮಲ್ಯ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಎಸ್ ಬಿ ಐ ಮತ್ತು ಯುನೈಟೆಡ್ ಬ್ಯಾಂಕ್ ಗಳು ಘೋಷಿಸಿದ್ದವು.

Write A Comment