ಮನೋರಂಜನೆ

ಪ್ರತ್ಯೂಷಾ ಬ್ಯಾನರ್ಜಿ – ರಾಹುಲ್ ರಾಜ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದೆ: ಸಲೋನಿ ಶರ್ಮ

Pinterest LinkedIn Tumblr

pratyusha-banerjee-rahul

ಮುಂಬಯಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಹಾಗೂ ಆಕೆಯ ಗೆಳೆಯ ರಾಹುಲ್‌ ರಾಜ್‌ ಸಿಂಗ್‌ ಮೇಲೆ ಫೆಬ್ರವರಿಯಲ್ಲಿ ನಾನು ಹಲ್ಲೆ ನಡೆಸಿದ್ದೆ ಎಂದು ರಾಹುಲ್ ರಾಜ ಸಿಂಗ್ ಮಾಜಿ ಗೆಳತಿ ಸಲೋನಿ ಶರ್ಮಾ ಹೇಳಿಕೆ ನೀಡಿದ್ದಾರೆ.

ಪ್ರತ್ಯೂಷಾ ಜತೆ ಗೆಳೆತನವಾಗುವುದಕ್ಕೂ ಮೊದಲು ರಾಹುಲ್‌ ಮತ್ತು ನಾನು 5 ವರ್ಷದಿಂದ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ಪ್ರೇಮ ಸಂಬಂಧ ಮುರಿದು ಬಿದ್ದ ನಂತರ ಫೆಬ್ರವರಿ 11ರಂದು ಕಾಂಡಿವಿಲಿಯ ಅಪಾರ್ಟ್‌ಮೆಂಟ್‌ಗೆ ತೆರಳಿ ರಾಹುಲ್‌ ಹಾಗೂ ಪ್ರತ್ಯೂಷಾ ಜತೆ ಜಗಳವಾಡಿದ್ದೆ. ‘ರಾಹುಲ್‌ ನಡೆಸುತ್ತಿದ್ದ ಇವೆಂಟ್‌ ಮ್ಯಾನೇಜ್‌ಮೆಂಟ್‌ ಆರಂಭಿಸಲು ನಾನು ಹಣ ನೀಡಿದ್ದೆ. ಅದನ್ನು ಆತ ಹಿಂದಿರುಗಿಸಿರಲಿಲ್ಲ. ಹಣ ಕೇಳಲು ಹೋಗಿದ್ದ ನನ್ನ ಮೇಲೆ ಇಬ್ಬರು ಮುಗಿಬಿದ್ದರು. ನನ್ನ ಮೇಲೆ ಕೈ ಮಾಡಿದರು. ನಂತರ ನಾನು ಹೊಡೆದೆ,’ಎಂದು ಸಲೋನಿ ಹೇಳಿದ್ದಾರೆ.

ಇದಾದ ನಂತರ ನಾನು ಬಂಗಾರು ನಗರ್‌ ಪೊಲೀಸ್‌ ಠಾಣೆಯಲ್ಲಿ ರಾಹುಲ್‌ ಹಾಗೂ ಪ್ರತ್ಯೂಷಾ ವಿರುದ್ಧ ಪ್ರಕರಣ ದಾಖಲಿಸಿದ್ದೆ. ಅವರಿಬ್ಬರು ಮನವಿ ಮಾಡಿಕೊಂಡ ನಂತರ ದೂರು ವಾಪಸ್‌ ಪಡೆದೆ. ಅದೇ ಪೊಲೀಸರು ಈಗ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಕುರಿತು ನನ್ನ ಹೇಳಿಕೆಯನ್ನೂ ಪಡೆದಿದ್ದಾರೆ. ಪ್ರತ್ಯೂಷಾ ರಾಹುಲ್‌ ಸಂಬಂಧ ಹದಗೆಡಲು ನಾನು ಕಾರಣ ಎಂದು ಹೇಳಲಾಗಿದೆ.

ನಾವಿಬ್ಬರು ಐದು ವರ್ಷದಿಂದ ಜೊತೆಗಿದ್ದೆವು. ಪ್ರತ್ಯೂಷಾ ಜೊತೆ ಕಳೆದ 10 ತಿಂಗಳಿಂದ ರಾಹುಲ್ ಗೆ ಸಂಬಂಧವಿತ್ತು. ನನಗೆ ತಿಳಿಯದಂತೆ ಅವರಿಬ್ಬರ ಸಂಬಂಧ ಗುಟ್ಟಾಗಿ ಶುರುವಾಗಿತ್ತು ಎಂದು ಸಲೋನಿ ಹೇಳಿಕೆ ನೀಡಿದ್ದಾರೆ.

Write A Comment