ಮುಂಬೈ: ಬಾಲಿವುಡ್ನ ಜನಪ್ರಿಯ ನಟ, ನಿರ್ದೇಶಕ ಆಮಿರ್ ಖಾನ್ ಈಗ ‘ಬಜಾಜ್ ನ ಹೊಸ ಉತ್ಪನ್ನವಾದ ವಿ’ ಬೈಕ್ ಖರೀದಿಸಿದ್ದಾರೆ.
1971ರ ಭಾರತ -ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಐಎನ್ಎಸ್ ವಿಕ್ರಾಂತ್ನಿಂದ ಸ್ಪೂರ್ತಿ ಪಡೆದುಕೊಂಡಿರುವ ಆಮಿರ್ ಖಾನ್, ಆ ನೆನಪಿಗಾಗಿ ಬಜಾಜ್ ವಿ15 ಬೈಕ್ ಖರೀದಿಸಿದ್ದಾರೆ. ವಿ-15 ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, 150ಸಿಸಿ ಸಾಮರ್ಥ್ಯದ ಬೈಕ್ ಆಗಿದೆ.
ಆಮಿರ್ಗೆ ಆಪ್ತರಾಗಿರುವ ರಾಜೀವ್ ಬಜಾಜ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಬಜಾಜ್ ವಿ15 ಕುರಿತು ಎಲ್ಲಾ ಮಾಹಿತಿ ಪಡೆದುಕೊಂಡ ಬಳಿಕ ಖರೀದಿಗೆ ಮುಂದಾದರು ಎಂದಿದ್ದಾರೆ.
ಬಜಾಜ್ ನಿರ್ಮಾಣದ ‘ವಿ’ ಸರಣಿಯ ಮೊದಲ ಬೈಕ್ ಖರೀದಿಸಿರುವ ಆಮಿರ್ ಖಾನ್ ತಮಗೆ ಅಗತ್ಯವೆನಿಸಿದ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ‘ಎ’ ಎಂದು ಉಬ್ಬು ಅಕ್ಷರ ವಿನ್ಯಾಸ ಮಾಡಿಸಿಕೊಂಡಿದ್ದಾರೆ.
‘ವಿ’ ಬೈಕ್ ವಿಶೇಷವಾದದ್ದು. ಇದನ್ನು ಬೇರಿನ್ನಾವುದೇ ಬೈಕ್ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇತಿಹಾಸ ನೆನಪಿಸುವಂಥ ವಿಶೇಷತೆ ಇರುವ ಬೈಕ್ ಇದಾಗಿದೆ ಎಂದು ಆಮೀರ್ ಖಾನ್ ಹೇಳಿದ್ದಾರೆ.