ಮುಂಬೈ

ಮುಂಬೈನ ಹಾಜಿ ಅಲಿ ದರ್ಗಾಕ್ಕೆ ಪ್ರವೇಶ ಮಾಡಿದ ಭೂಮಾತಾ ಬ್ರಿಗೇಡ್ ಸಂಸ್ಥೆಯ ಮುಖ್ಯಸ್ಥೆ ತೃಪ್ತಿ ದೇಸಾಯಿ

Pinterest LinkedIn Tumblr

haji-ali-trupti-desai

ಮುಂಬೈ: ಭೂಮಾತಾ ಬ್ರಿಗೇಡ್ ಸಂಸ್ಥೆಯ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರು ಗುರುವಾರ ಮುಂಬೈನ ಹಾಜಿ ಅಲಿ ದರ್ಗಾಕ್ಕೆ ಪ್ರವೇಶ ಮಾಡಿದ್ದಾರೆ.

ಪೊಲೀಸರ ಬೆಂಗಾವಲಿನಲ್ಲಿ ದರ್ಗಾಗೆ ಪ್ರವೇಶ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಹಿಂದೆ ಮಹಿಳೆಯರಿಗೆ ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಆಡಳಿತ ಮಂಡಳಿ ನಿರಾಕರಿಸಿತ್ತು. ಇದೀಗ ಪೊಲೀಸರ ಬೆಂಗಾವಲಿನೊಂದಿಗೆ ತೃಪ್ತಿ ದೇಸಾಯಿ ಹಾಜಿ ಅಲಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ಶನಿ ಸಿಗ್ನಾಪುರ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧ ಹೇರಲಾಗಿತ್ತು. ಪುರುಷರಿಗೆ ಮಾತ್ರ ಶನೇಶ್ವರ ದೇವಾಲಯ ಪ್ರವೇಶಕ್ಕೆ ಅವಕಾಶವಿತ್ತು. ಇದನ್ನು ಖಂಡಿಸಿ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಹಲವಾರು ಬಾರಿ ಪ್ರತಿಭಟನೆ ನಡೆಸಲಾಯಿತು. ಕಡೆಗೆ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಹಾಜಿ ಅಲಿ ದರ್ಗಾಕ್ಕೂ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ದರ್ಗಾದಲ್ಲಿ ಎಲ್ಲಾ ಮಹಿಳೆಯರ ಪ್ರವೇಶಕ್ಕೂ ಅವಕಾಶ ಸಿಗಲಿ ಅಂತಾ ಪ್ರಾರ್ಥಿಸಿದ್ದೇನೆ. ಮಹಿಳೆಯರಿಗೆ ಪ್ರವೇಶ ಸಿಗುತ್ತದೆ ಅನ್ನೋ ನಂಬಿಕೆಯಿದೆ. ಈ ಕುರಿತಂತೆ ಭೂಮಾತಾ ಬ್ರಿಗೇಡ್ ಹೋರಾಟ ಮುಂದುವರೆಸಲಿದೆ. ದರ್ಗಾ ಪ್ರವೇಶ ಸಂಬಂಧ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ. ಮಹಿಳೆಯರಿಗೂ ಅವಕಾಶ ಸಿಗೋವರೆಗೂ ಹೋರಾಟ ನಡೆಸುತ್ತೇನೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

Write A Comment