ಮನೋರಂಜನೆ

ಏಷ್ಯನ್ ಕ್ರೀಡಾಕೂಟ : 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಭಾರತದ ಜಿತು ರೈಗೆ ಚಿನ್ನದ ಪದಕ

Pinterest LinkedIn Tumblr

Jitu-rai

ಇಂಚೆನ್, ಸೆ.20: ದಕ್ಷಿಣ ಕೊರಿಯಾದ ಇಂಚೆನ್‍ನಲ್ಲಿ ನಡೆಯುತ್ತಿರುವ 17ನೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಜಿತು ರೈ ಅವರು ಮೊದಲ ಚಿನ್ನ ತಂದುಕೊಡುವುದರ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಉದ್ಘಾಟನೆ ದಿನದಂದೇ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪಂದ್ಯದ ವೇಳೆ ಶ್ವೇತಾಚೌಧರಿ ಅವರು ಕಂಚು ಗೆದ್ದಿದ್ದರು. ಇಂದು ನಡೆದ ಪುರುಷರ ವಿಭಾಗದಲ್ಲಿ 50 ಮೀಟರ್ ಏರ್‍ಪಿಸ್ತೂಲ್‍ನಲ್ಲಿ ಭಾರತದ ಜಿತು ರೈ 186 ಪಾಯಿಂಟ್ ಗಳಿಸುವುದರ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಪ್ರಾರಂಭದ ಸುತ್ತಿನಿಂದಲೂ ಜಿತು ರೈಗೆ ಚೀನಾದ ವೈ ಪಾಂಗ್ ಮತ್ತು ವಿಯೆಟ್ನಾಮ್‍ನ ಹೋಂಗ್ ನುಯೆನ್ ಅವರು ಪ್ರಬಲ ಸ್ಪರ್ಧೆ ಒಡ್ಡಿದರು.

ಆದರೆ, ಈ ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿದ ರೈ ಫೈನಲ್ ಸುತ್ತಿನಲ್ಲಿ 186 ಪಾಯಿಂಟ್ ಪಡೆಯುವುದರ ಮೂಲಕ 50 ಮೀಟರ್ ಪಿಸ್ತೂಲ್‍ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದರು. ಮೂಲತಃ ಉತ್ತರ ಪ್ರದೇಶದ ಲಖನೌ ನಿವಾಸಿಯಾದ ರೈ 186 ಪಾಯಿಂಟ್ ಪಡೆದರೆ, ಚೀನಾ ಹಾಗೂ ವಿಯೆಟ್ನಾಮ್ ಸ್ಪರ್ಧಿಗಳು ಇಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಶುಭಾಶಯಗಳ ಮಹಾಪೂರ: ಏಷ್ಯಾ ಕ್ರೀಡಾಕೂಟದಲ್ಲಿ ರೈ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲೂ ರೈ ಉತ್ತಮ ಸಾಧನೆ ಮಾಡಿದ್ದರು.

ಶ್ವೇತಾಗೆ ಕಂಚು.. : ಉದ್ಘಾಟನೆ ದಿನದಂದೇ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪಂದ್ಯದ ವೇಳೆ ಶ್ವೇತಾಚೌಧರಿ ಅವರು ಕಂಚು ಗೆದ್ದಿದ್ದರು.

Write A Comment