ಮನೋರಂಜನೆ

ಭಾರತಕ್ಕೆ ಒಂದೇ ದಿನ 11 ಪದಕ

Pinterest LinkedIn Tumblr

women

ಇಂಚೆನ್‌: ಆರ್ಚರಿ ಮತ್ತು ಸ್ಕ್ವಾಷ್‌ ಗಳಲ್ಲಿ ತಲಾ ಒಂದು ಚಿನ್ನ ಸೇರಿ ಭಾರತ 17ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಶನಿ­ವಾರ ಒಂದೇ ದಿನ ಒಟ್ಟು 11 ಪದಕಗಳನ್ನು ಗೆದ್ದು­ಕೊಂಡಿದೆ.

ಅಭಿಷೇಕ್‌ ವರ್ಮ, ರಜತ್‌ ಚೌಹಾಣ್‌ ಮತ್ತು ಸಂದೀಪ್‌ ಕುಮಾರ್‌ ಅವರನ್ನು ಒಳಗೊಂಡ ಭಾರತ ಪುರುಷರ ಆರ್ಚರಿ ತಂಡ ದಕ್ಷಿಣ ಕೊರಿಯವನ್ನು ಮಣಿಸಿ ಸ್ವರ್ಣ ಸಾಧನೆ ಮಾಡಿತು. ಸ್ಕ್ವಾಷ್‌ ಪುರುಷರ ತಂಡ ಫೈನಲ್‌ನಲ್ಲಿ 2–0ರಲ್ಲಿ ಮಲೇಷ್ಯಾವನ್ನು ಸೋಲಿಸಿತು.

ಈ ಎರಡೂ ಕ್ರೀಡೆಗಳಲ್ಲಿ ಏಷ್ಯನ್‌ ಕೂಟದಲ್ಲಿ ಭಾರತಕ್ಕೆ ಚಿನ್ನ ಬಂದಿದ್ದು ಇದೇ ಮೊದಲು. ಸ್ಕ್ವಾಷ್‌ ಮತ್ತು ಆರ್ಚರಿಯಲ್ಲಿ ಭಾರತ ಮಹಿಳಾ ತಂಡಗಳು ಬೆಳ್ಳಿ ಯ ಪದಕಗಳನ್ನು ಗೆದ್ದುಕೊಂಡಿವೆ. ಶನಿವಾರ ಆರಂಭವಾದ ಅಥ್ಲೆಟಿಕ್ಸ್‌ನಲ್ಲಿ ಭಾರತ ಎರಡು ಪದಕ ಜಯಿಸಿದೆ. 3000ಮೀ. ಸ್ಪೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ಲಲಿತಾ ಬಾಬರ್‌ ರಜತ ಗೆದ್ದರೆ, ಸುಧಾ ಸಿಂಗ್‌ ಕಂಚು ತಮ್ಮದಾಗಿಸಿಕೊಂಡರು. ಒಟ್ಟು ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು 20 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದೆ.

Write A Comment