ಮನೋರಂಜನೆ

ಇಂಚಾನ್ ಏಷಿಯನ್ ಗೇಮ್ಸ್ ನಲ್ಲಿ ಮೇರಿ ಕೊಮ್ ಗೆ ಚಿನ್ನ

Pinterest LinkedIn Tumblr

meri-com

ಇಂಚಾನ್ : ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್ (48-51 ಕೆ.ಜಿ)ನಲ್ಲಿ ಭಾರತದ ಬಾಕ್ಸಿಂಗï ಪಟು ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ. ಬುಧವಾರ ನಡೆದ ಫೈನಲ್ ಪಂದ್ಯದಲ್ಲ್ಲಿ ಖಜಕಿಸ್ತಾನ್‍ನ ಶೆಖರ್‍ಬೆಕೋವಾ ಅವರನ್ನು ಮೇರಿ ಪರಾಭವಗೊಳಿಸಿದ್ದಾರೆ. ನಾಲ್ಕು ಸುತ್ತಿನ ಈ ಹೋರಾಟದಲ್ಲಿ ಮೂರು ಸುತ್ತುಗಳಲ್ಲಿಯೂ ಮೇರಿ ಉತ್ತಮ ಪ್ರದರ್ಶನವನ್ನು ನೀಡಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇಲ್ಲಿಯವರೆಗೆ ಆರು ಬಾರಿ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಸ್ರ್ಪಸಿ 5 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿರುವ ಮೇರಿ ಒಲಿಂಪಿಕ್ಸ್‍ವಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರï ಆಗಿದ್ದಾರೆ. ಅದೇ ವೇಳೆ ಏಷ್ಯನï ಗೇಮ್ಸ್‍ನಲ್ಲಿ ಪದಕ ಗೆಲ್ಲುವ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಯೂ ಈಗ ಮೇರಿ ಪಾಲಾಗಿದೆ .

ಎರಡು ಬಾರಿ ಸಿಸೇರಿಯನï ಶಸ್ತ್ರ ಚಿಕಿತ್ಸೆಗೊಳಗಾಗಿರುವ ಮೇರಿ ಮೂರು ಮಕ್ಕಳ ತಾಯಿಯಾಗಿದ್ದಾರೆ. ನನ್ನ ಹೋರಾಟದಲ್ಲಿ ನಂಬಿಕೆ ಇಲ್ಲದವರಿಗೆ ಅವರ ಅಭಿಪ್ರಾಯ ತಪ್ಪು ಎಂಬುದನ್ನು ಸಾಸಿ ತೋರಿಸುವೆ. ಏಕೆಂದರೆ ನಾನು ಫೈಟರ್ ಏಷ್ಯನ್ ಗೇಮ್ಸ್ ನಲ್ಲಿ ನಾನದನ್ನು ಸಾಬೀತು ಪಡಿಸುವೆ ಎಂದು ಹೇಳಿದ್ದರು. ಮೇರಿ ತನ್ನ ಮಾತಿನಂತೆ ಇದೀಗ ಚಿನ್ನ ಗೆದ್ದುಕೊಂಡು ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.

Write A Comment