ಮನೋರಂಜನೆ

ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತದ ಶ್ರೀಕಾಂತ್

Pinterest LinkedIn Tumblr

k.-srikanth

ಫುಜೌ(ಚೀನಾ): ಹಾಲಿ ಒಲಿಂಪಿಕ್ ಮತ್ತು ವಿಶ್ವಚಾಂಪಿಯನ್ ಆಗಿರುವ ಚೀನಾದ ಲಿನ್ ಡಾನ್ ವಿರುದ್ಧ ಭಾರತದ ಶ್ರೀಕಾಂತ್ ಅಚ್ಚರಿಯ ಗೆಲವು ಸಾಧಿಸಿ ಚಾಂಪಿಯನ್ ಆಗಿದ್ದಾರೆ.

ಚೀನಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಭಾರತಕ್ಕೆ ಡಬಲ್ ಧಮಾಕ. ಮಹಿಳಾ ಸಿಂಗಲ್ಸ್‌’ನಲ್ಲಿ ಸೈನಾ ನೆಹ್ವಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲೇ ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್, ಲಿನ್ ಡಾನ್ ವಿರುದ್ಧ ಭರ್ಜರಿ ಗೆಲವು ಪಡೆದಿದ್ದಾರೆ.

ಒಲಿಂಪಿಕ್ಸ್ ಸ್ಪೋರ್ಟ್ ಸೆಂಟರ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಲಿನ್ ಡ್ಯಾನ್ ವಿರುದ್ಧ 21-19, 21-17ರಿಂದ ಶ್ರೀಕಾಂತ್ ಜಯ ಸಾಧಿಸಿದ್ದಾರೆ. 42 ನಿಮಿಷಗಳ ವಿರೋಚಿತ ಹೋರಾಟದಲ್ಲಿ ಶ್ರೀಕಾಂತ್ ಲಿನ್ ಡ್ಯಾನ್‌ಗೆ ಸೋಲುಣಿಸಿದ್ದಾರೆ.

Write A Comment