ಫುಜೋವು(ಚೀನಾ): ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಚೀನಾ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದುಕೊಂಡಿರುವ ಹೆಗ್ಗಳಿಕೆ ಸೈನಾ ನೆಹ್ವಾಲ್ ಪಾತ್ರರಾಗಿದ್ದಾರೆ.
ಜಪಾನ್‌ನ ಆಕಾನೆ ಯಮಗುಚಿ ವಿರುದ್ಧ ಸೈನಾ ಗೆಲುವು ಸಾಧಿಸಿದ್ದಾರೆ. 21-12, 22-20 ನೇರ ಅಂಕಗಳಿಂದ ಸೈನಾ ವಿಜಯದ ಪಥಾಕೆ ಹಾರಿಸಿದ್ದಾರೆ. ಒಟ್ಟಿನಲ್ಲಿ ಸೈನಾ ಗೆದ್ದಿರುವ ಪ್ರಶಸ್ತಿಗಳ ಪೈಕಿ 2014ರಲ್ಲಿ 3ನೇ ಪ್ರಶಸ್ತಿ ಇದಾಗಿದೆ.
ಹೇಕ್ಷಿಯಾ ಒಲಿಂಪಿಕ್ಸ್ ಸ್ಪೋರ್ಟ್ ಸೆಂಟರ್‌ನಲ್ಲಿ ಶನಿವಾರ ನೆಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, 21-17, 21-17 ನೇರ ಅಂಕಗಳಿಂದ ಚೀನಾದ ಲಿಯು ಕ್ಷಿನ್ ವಿರುದ್ಧ ಜಯಗಳಿಸಿದ್ದರು.
ಒಟ್ಟು 47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 5ನೇ ಶ್ರೇಯಾಂಕಿತೆ ಸೈನಾ, ಉತ್ತಮ ಆಟ ಪ್ರದರ್ಶಿಸುವ ಮೂಲಕ ವಿಶ್ವದ 17ನೇ ಶ್ರೇಯಾಂಕಿತೆ ಲಿಯು ಕ್ಷಿನ್‌ಗೆ ನಿರೀಕ್ಷಿತ ಸೋಲುಣಿಸಿದರು.
ಪ್ರಾರಂಭದಲ್ಲಿ ಸೈನಾ ನೆಹ್ವಾಲ್ ಹಿನ್ನಡೆ ಅನುಭವಿಸಿದ್ದರು. ಮೊದಲ ಗೇಮ್‌ನ ಒಂದು ಹಂತದಲ್ಲಿ ಲಿಯು ಕ್ಷಿನ್, 7-4ರ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದ್ದರು.