ಬೆಂಗಳೂರು: ಕೆಲ ವರ್ಷಗಳಿಂದ ನಟ ದುನಿಯಾ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದ್ದು, ದುನಿಯಾ ವಿಜಿ ದಂಪತಿಗಳು ಮತ್ತೆ ಒಂದಾಗಿ ಸುಖ ಸಂಸಾರ ನಡೆಸಲು ಮನಸು ಮಾಡಿದ್ದಾರೆ.
ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ನೀಡಲು ದುನಿಯಾ ವಿಜಯ್ ಬಯಸಿದ್ದರು. ಹೀಗಾಗಿ ಇಂದು ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡು ಕಡೆಯ ವಾದಗಳನ್ನು ಆಲಿಸಲಾಯಿತು.
ವಾದ ವಿವಾದಗಳನ್ನು ಆಲಿಸಿದ ಕೆ.ಎಸ್ ಶ್ರೀನಿವಾಸ್ ಅವರು ಕೊನೆಗೆ ಇಬ್ಬರ ನಡುವಿನ ಮನಸ್ಥಾಪವನ್ನು ತೊಡೆದು ಹಾಕಿದ್ದಾರೆ. ಹೀಗಾಗಿ ದುನಿಯಾ ವಿಜಿ ಹಾಗೂ ನಾಗರತ್ನ ಇಬ್ಬರು ಪರಸ್ಪರ ಒಂದಾಗಿ ಬಾಳುವ ಮನಸು ಮಾಡಿದ್ದಾರೆ. ಅಲ್ಲದೆ ಪರಸ್ಪರ ಇಬ್ಬರು ದಾಖಲಿಸಿದ್ದ ವಿಚ್ಛೇದನ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆ.
ದುನಿಯಾ ವಿಜಿ ದಾಂಪತ್ಯ ಬದುಕಿನಲ್ಲಿ ಬಿರುಕು ಮೂಡಿತ್ತು. ಇದರಿಂದಾಗಿ ವಿಜಯ್ ವಿಚ್ಛೇದನ ಪಡೆಯಲು ಬಯಸಿದ್ದರು. ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಇಬ್ಬರ ನಡುವಿನ ವಾದ ವಿವಾದಗಳನ್ನು ಆಲಿಸಲು ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆ ನಡೆಸಲಾಯಿತು.