ಮನೋರಂಜನೆ

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಸರ್ಜುಬಾಲಾ, ಸ್ವೀಟಿಗೆ ಬೆಳ್ಳಿ ಪದಕ

Pinterest LinkedIn Tumblr

sarrjubalasilvernew

ಜೆಜು (ದಕ್ಷಿಣ ಕೊರಿಯಾ), ನ.24: ಎಂಟನೆ ಆವೃತ್ತಿಯ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಎಸ್. ಸರ್ಜುಬಾಲಾ(48 ಕೆಜಿ) ಹಾಗೂ ಸ್ವೀಟಿ(81 ಕೆಜಿ) ಫೈನಲ್‌ನಲ್ಲಿ ಎಡವುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇಲ್ಲಿ ಸೋಮವಾರ ಅಂತ್ಯಗೊಂಡ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಸರ್ಜುಬಾಲಾ ಅವರು ಕಝಕಿಸ್ತಾನದ ವಿಶ್ವದ ನಂ.3ನೆ ಆಟಗಾರ್ತಿ ನಾಝಿಂ ಕಿಝೈಬೆ ವಿರುದ್ಧ ಸೋತರು. ಮತ್ತೊಂದು ಫೈನಲ್ ಹಣಾಹಣಿಯಲ್ಲಿ ಸ್ವೀಟಿ ಅವರು ಚೀನಾದ ಯಾಂಗ್ ಕ್ಲಿಯೊಲಿಗೆ ಶರಣಾಗಿ ಬೆಳ್ಳಿ ಪದಕವನ್ನು ಪಡೆದರು. ಮೊದಲ ಫೈನಲ್ ಪಂದ್ಯದಲ್ಲಿ ಸರ್ಜುಬಾಲಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಮೊದಲ ಸುತ್ತನ್ನು ಸುಲಭವಾಗಿ ಗೆದ್ದುಕೊಂಡರು.

ಎರಡನೆ ಸುತ್ತಿನಲ್ಲಿ ಕಝಕಿಸ್ತಾನದ ಬಾಕ್ಸರ್ ಚೇತರಿಕೆಯ ಪ್ರದರ್ಶನ ನೀಡಿದರು. ಮೂರನೆ ಸುತ್ತಿನಲ್ಲಿ ಸರ್ಜುಬಾಲಾ ಹಾಗೂ ಕಿಝೈಬೆ ಸಮಬಲದ ಹೋರಾಟ ನೀಡಿದರು. ನಾಲ್ಕನೆ ಸುತ್ತಿನಲ್ಲಿ ಎಚ್ಚರಿಕೆಯ ಆಟವಾಡಿದ ವಿಶ್ವದ ನಂ.3ನೆ ಆಟಗಾರ್ತಿ ಕಿಝೈಬೆ ಪಂದ್ಯವನ್ನು ಜಯಿಸಿದರು. ಎರಡನೆ ಫೈನಲ್ ಪಂದ್ಯದಲ್ಲಿ ಭಾರತದ ಸ್ವೀಟಿ ಆರಂಭದಲ್ಲೇ ಕಳಪೆ ಪ್ರದರ್ಶನ ನೀಡಿದರು. ಚೀನಾ ಆಟಗಾರ್ತಿಯ ಶಕ್ತಿಶಾಲಿ ಪಂಚ್‌ಗೆ ಸ್ವೀಟಿ ನಿರುತ್ತರರಾದರು. ನೀಳಕಾಯದ ಯಾಂಗ್ ಎರಡನೆ ಸುತ್ತಿನಲ್ಲಿ ಹಿಡಿತ ಸಾಧಿಸಿದರು. ಹರ್ಯಾಣದ ಸ್ವೀಟಿ ಮೂರನೆ ಹಾಗೂ ನಾಲ್ಕನೆ ಸುತ್ತಿನಲ್ಲಿ ಸುಧಾರಿತ ಪ್ರದರ್ಶನ ನೀಡಿ ದರು. ಆದರೆ ಸಂದರ್ಭೋಚಿತ ಹೊಡೆತದಿಂದ ಚೀನಾ ಆಟ ಗಾರ್ತಿ ಮೇಲುಗೈ ಸಾಧಿಸಿ ಪಂದ್ಯವನ್ನು ವಶಪಡಿಸಿಕೊಂಡರು.

Write A Comment